Advertisement

ನರಗುಂದ ಪುರಸಭೆಗೆ 29ರಂದು ಚುನಾವಣೆ

04:05 PM May 12, 2019 | Team Udayavani |

ನರಗುಂದ: ಗದಗ ಜಿಲ್ಲೆಯಲ್ಲಿ ಚುನಾವಣೆ ಎದುರಿಸಲಿರುವ ಎರಡು ಸ್ಥಳೀಯ ಸಂಸ್ಥೆಗಳಲ್ಲಿ ಒಂದಾದ, ಬಂಡಾಯ ಖ್ಯಾತಿಯ ನರಗುಂದ ಪುರಸಭೆಗೆ ಮೇ.29ರಂದು ಚುನಾವಣೆ ನಡೆಯಲಿದ್ದು,ಮೇ.9ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಪಟ್ಟಣದಲ್ಲಿ 13,899 ಪುರುಷರು, 13,717 ಮಹಿಳೆ ಸೇರಿ 27,616 ಮತದಾರರು ಹಕ್ಕು ಚಲಾಯಿಸಲಿದ್ದಾರೆ.

Advertisement

ಐದು ಗ್ರಾಮಗಳನ್ನೊಳಗೊಂಡ ನರಗುಂದ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿವೆ. 1857ರಲ್ಲಿ ಅರಸ ಬಾಬಾಸಾಹೇಬ ಭಾವೆ ಆಳ್ವಿಕೆಯಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವಾತಂತ್ರ್ಯ ಬಂಡಾಯ ಮತ್ತು ಬೆಟರಮೆಂಟ್ ಲೆವಿ ವಿರೋಧಿಸಿ 1980ರಲ್ಲಿ ರೈತ ಬಂಡಾಯ ಸೇರಿ ಎರಡು ಬಂಡಾಯಕ್ಕೆ ನಾಂದಿ ಹಾಡಿದ ಈ ನೆಲ ಬಂಡಾಯ ನಾಡೆಂದೇ ಪ್ರತೀತಿ ಪಡೆದು ನಾಡಿನ ಇತಿಹಾಸ ಪುಟಗಳಲ್ಲಿ ಛಾಪು ಮೂಡಿಸಿದೆ.

ವಾರ್ಡ್‌ವಾರು ಮತದಾರ: ಪಟ್ಟಣದ 1ನೇ ವಾರ್ಡ್‌ನಲ್ಲಿ 730 ಪುರುಷ,767 ಮಹಿಳೆ ಸೇರಿ 1497, 2ನೇ ವಾರ್ಡ್‌ನಲ್ಲಿ 491 ಪುರುಷ, 502 ಮಹಿಳೆ ಸೇರಿ 993, 3ನೇ ವಾರ್ಡ್‌ನಲ್ಲಿ 736 ಪುರುಷ,739 ಮಹಿಳೆ ಸೇರಿ 1475, 4ನೇ ವಾರ್ಡ್‌ನಲ್ಲಿ 583 ಪುರುಷ, 578 ಮಹಿಳೆ ಸೇರಿ 1161, 5ನೇ ವಾರ್ಡ್‌ನಲ್ಲಿ 609 ಪುರುಷ, 641 ಮಹಿಳೆ ಸೇರಿ 1250, 6ನೇ ವಾರ್ಡ್‌ನಲ್ಲಿ 605 ಪುರುಷ, 633 ಮಹಿಳೆ ಸೇರಿ 1238, 7ನೇ ವಾರ್ಡ್‌ನಲ್ಲಿ 393 ಪುರುಷ, 398 ಮಹಿಳೆ ಸೇರಿ 791, 8ನೇ ವಾರ್ಡ್‌ನಲ್ಲಿ 617 ಪುರುಷ, 565 ಮಹಿಳೆ ಸೇರಿ 1182, 9ನೇ ವಾರ್ಡ್‌ನಲ್ಲಿ 669 ಪುರುಷ, 621 ಮಹಿಳೆ ಸೇರಿ 1290 ಮತದಾರರಿದ್ದಾರೆ.

10ನೇ ವಾರ್ಡ್‌ನಲ್ಲಿ 677 ಪುರುಷ, 671 ಮಹಿಳೆ ಸೇರಿ 1348, 11ನೇ ವಾರ್ಡ್‌ನಲ್ಲಿ 458 ಪುರುಷ,476 ಮಹಿಳೆ ಸೇರಿ 934, 12ನೇ ವಾರ್ಡ್‌ನಲ್ಲಿ 730 ಪುರುಷ,733 ಮಹಿಳೆ ಸೇರಿ 1463, 13ನೇ ವಾರ್ಡ್‌ನಲ್ಲಿ 604 ಪುರುಷ, 583 ಮಹಿಳೆ ಸೇರಿ 1187, 14ನೇ ವಾರ್ಡ್‌ನಲ್ಲಿ 608 ಪುರುಷ, 558 ಮಹಿಳೆ ಸೇರಿ 1166, 15ನೇ ವಾರ್ಡ್‌ನಲ್ಲಿ 480 ಪುರುಷ, 483 ಮಹಿಳೆ ಸೇರಿ 963, 16ನೇ ವಾರ್ಡ್‌ನಲ್ಲಿ 551 ಪುರುಷ, 587 ಮಹಿಳೆ ಸೇರಿ 1138, 17ನೇ ವಾರ್ಡ್‌ನಲ್ಲಿ 777 ಪುರುಷ, 781 ಮಹಿಳೆ ಸೇರಿ 1558 ಮತದಾರರಿರುವರು.

18ನೇ ವಾರ್ಡ್‌ನಲ್ಲಿ 584 ಪುರುಷ, 565 ಮಹಿಳೆ ಸೇರಿ 1149, 19ನೇ ವಾರ್ಡ್‌ನಲ್ಲಿ 511 ಪುರುಷ, 477 ಮಹಿಳೆ ಸೇರಿ 988, 20ನೇ ವಾರ್ಡ್‌ನಲ್ಲಿ 642 ಪುರುಷ, 571 ಮಹಿಳೆ ಸೇರಿ 1213, 21ನೇ ವಾರ್ಡ್‌ನಲ್ಲಿ 517 ಪುರುಷ, 524 ಮಹಿಳೆ ಸೇರಿ 1041, 22ನೇ ವಾರ್ಡ್‌ನಲ್ಲಿ 801 ಪುರುಷ, 800 ಮಹಿಳೆ ಸೇರಿ 1601, 23ನೇ ವಾರ್ಡ್‌ನಲ್ಲಿ 526 ಪುರುಷ, 464 ಮಹಿಳೆ ಸೇರಿ 990 ಮತದಾರರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next