ಬೆಳಗಾವಿ: ಕಾಂಗ್ರೆಸ್, ಜೆಡಿಎಸ್ ಕಿತ್ತಾಟದಿಂದ ರಾಜ್ಯದ ಜನರಿಗೆ ಅನ್ಯಾಯ ಆಗುತ್ತಿದೆ. ವಿಧಾನಸೌಧದಿಂದ ಆಡಳಿತ ನಡೆಯುತ್ತಿದೆಯೋ, ರೆಸಾರ್ಟ್ ನಿಂದ ಆಡಳಿತ ನಡೆಯುತ್ತಿದೆಯೋ ಗೊತ್ತಾಗುತ್ತಿಲ್ಲ. ಇಂತಹ ಸರ್ಕಾರ ಇರುವುದಕ್ಕಿಂತ ಚುನಾವಣೆ ಆದರೆ ಒಳ್ಳೆಯದು ಎಂದು ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ವಾಗ್ದಾಳಿ ನಡೆಸಿದರು.
ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಸಮ್ಮಿಶ್ರ ಸರ್ಕಾರ ಅಲ್ಲ, ಸರ್ಕಸ್ ಸರ್ಕಾರ ಎಂದು ಟೀಕಿಸಿದರು. ಈ ಸರ್ಕಾರ ಗುತ್ತಿಗೆದಾರರಿಂದ ಆರು ಪರ್ಸೆಂಟ್ ಹಣ ಶಾಸಕರಿಂದ ಪಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಶಾಸಕರು ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಕಮಿಷನ್ ಕೊಟ್ಟು ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಹಣ ತರ್ತಾಯಿರುವುದು ಇದೇ ಮೊದಲ ಸಲ ಎಂದು ದೂರಿದರು. ಸಮ್ಮಿಶ್ರ ಸರ್ಕಾರದಲ್ಲಿ ಈ ರೀತಿ ಎಲ್ಲಾ ಶಾಕರಿಗೆ ಅನುಭವ ಆಗಿದೆ ಎಂದರು.
ಹೊಸ ಸರ್ಕಾರದಲ್ಲಿ ನಮ್ಮ ಜಿಲ್ಲೆಯಿಂದ ಮಂತ್ರಿ ಆಗುವವರು ಉಮೇಶ್ ಕತ್ತಿ, ಇಲ್ಲ ಬಾಲಚಂದ್ರ ಜಾರಕಿಹೊಳಿ.ನಾವೆಲ್ಲರೂ ಶಾಸಕರಾಗಿ ಇರ್ತೇವಿ.
ಈಗ ಚುನಾವಣೆಗೆ ಹೋಗೊದಾದರೆ ನಾವು ತಯಾರಾಗಿದ್ದೇವೆ. ಈ ರೀತಿ ಬದುಕೋದು ಬೇಡ. ಈ ಸರ್ಕಾರ ಸತ್ತತಂತೂ ಇಲ್ಲ ಜೀವಂತ ಇದೆ ಅಂತೂ ಇಲ್ಲ. ಇಂತಹ ಸರ್ಕಾರದಲ್ಲಿ ಇರುವುದಕ್ಕಿಂತ ಚುನಾವಣೆ ಆದರೆ ಒಳ್ಳೆಯದು ಎಂದು ಹೇಳಿದರು.