ಬೆಳ್ತಂಗಡಿ: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಂಜುನಾಥ ಭಂಡಾರಿ ಅವರು ಗುರುವಾರ ದಂಪತಿ ಸಹಿತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದರು.
ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಧರ್ಮಾಧಿಕಾರಿ ಅವರೊಂದಿಗೆ ಮಾತುಕತೆ ನಡೆಸಿ ದರು. ಗ್ರಾಮೀಣ ಅಭಿವೃದ್ಧಿಗೆ ಮಹತ್ತರವಾದ ಕೊಡುಗೆಗಳು ಇಂದಿಗೆ ಅವಶ್ಯವಾಗಿದ್ದು, ಪಂಚಾಯತ್‌ರಾಜ್ ಯೋಜನೆಯ ಕುರಿತು ಡಾ| ಹೆಗ್ಗಡೆ ಅವರು ಸಲಹೆಗಳನ್ನು ನೀಡಿ ಶುಭಾಶಯ ಕೋರಿದರು.
ಈ ವೇಳೆ ಭಂಡಾರಿ ಅವರು ಮಾತನಾಡಿ, ನಾನು ರಾಜಕೀಯಶಾಸ್ತ್ರ ದಲ್ಲಿ ಎಂ.ಎ. ಪದವಿ ಪಡೆದು ಪಂಚಾಯತ್‌ರಾಜ್ ಕುರಿತ ಪ್ರಬಂಧ ದಲ್ಲಿ ಎಂಫಿಲ್ ಮತ್ತು ಡಾಕ್ಟರೆಟ್ ಪಡೆದಿದ್ದರಿಂದ ಪಂಚಾಯತ್‌ರಾಜ್ ವ್ಯವಸ್ಥೆಗಳ ಸಶಕ್ತೀಕರಣ ಮತ್ತು ಉತ್ತಮಗೊಳಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ದ್ದೇನೆ ಎಂದರು.
ಇದನ್ನೂ ಓದಿ:ಪೆನ್ಸಿಲ್‌ಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಪುಟಾಣಿಗಳು-ವಿಡಿಯೋ ವೈರಲ್
ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗ್ರಾಮ ಸ್ವರಾಜ್ಯದ ಆಶಯಗಳು ಸಾಕಾರಗೊಳ್ಳಲು ಹಾಗೂ ಉತ್ತಮಗೊಳಿಸುವ ಆಶಯ ಒಂದೆಡೆಯಾದರೆ, ಜಿಲ್ಲೆಯ ಯುವಜನತೆಯನ್ನು ಸ್ವಾವಲಂಬಿಗಳ ನ್ನಾಗಿ ಮಾಡಿ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶ ಹೊಂದಲಾಗಿದೆ. ತಮ್ಮ ಗ್ರಾಮಗಳಲ್ಲೇ ಆಧುನಿಕ ತಂತ್ರ ಜ್ಞಾನದ ಸವಲತ್ತುಗಳನ್ನು ಕೊಟ್ಟು ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ಅನೇಕ ಗಾಮೀಣ ಅಭಿವೃದ್ಧಿ ಯೋಜನೆಗಳನ್ನು ತರುವ ಆಸಕ್ತಿ ಹೊಂದಿರುವುದಾಗಿ ತಿಳಿಸಿದರು.