Advertisement

ಮಹಿಳಾ ಅಧಿಕಾರಿಗಳ ನೇತೃತ್ವದ ಚುನಾವಣೆ!

01:45 AM Mar 28, 2019 | Sriram |

ಉಡುಪಿ: ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಎಸ್‌ಪಿ, ಜಿಪಂ ಸಿಇಒ, ಅಪರ ಜಿಲ್ಲಾಧಿಕಾರಿ -ಈ ನಾಲ್ಕೂ ಪ್ರಮುಖ ಹುದ್ದೆಗಳನ್ನು ಏಕಕಾಲದಲ್ಲಿ ಮಹಿಳೆಯರು ಅಲಂಕರಿಸಿರುವುದು ಮಾತ್ರ ವಿಶೇಷವಲ್ಲ, ಇಲ್ಲಿ ಲೋಕಸಭಾ ಚುನಾವಣೆಯೂ ಪ್ರಥಮ ಬಾರಿಗೆ ಇವರ ನೇತೃತ್ವದಲ್ಲಿ ನಡೆಯುತ್ತಿದೆ.

Advertisement

ಇವರಲ್ಲಿ ಮೊದಲಮೂವರಿಗೆ ಈ ಪ್ರಮುಖ ಹೊಣೆಗಾರಿಕೆ ಮೊದಲ ಬಾರಿಗೆ ಸಿಕ್ಕಿದರೆ, ಎಡಿಸಿಯವರಿಗೆ ಎರಡನೆಯ ಅನುಭವ.

ಹೆಪ್ಸಿಬಾ ರಾಣಿಯವರು ಇದೇ ಮೊದಲ ಬಾರಿ ಡಿಸಿ ಮತ್ತು ಚುನಾವಣಾಧಿ ಕಾರಿಯಾಗಿದ್ದಾರೆ. ಇವರು 2018ರ ವಿಧಾನಸಭಾ ಚುನಾವಣೆ ಸಂದರ್ಭ ಕಲಬುರಗಿ ಜಿ.ಪಂ. ಸಿಇಒ ಮತ್ತು ಜಿಲ್ಲಾಸ್ವೀಪ್‌ ಸಮಿತಿ ಅಧ್ಯಕ್ಷರಾಗಿದ್ದರು. ಆಗ ಶ್ರೇಷ್ಠ ಪ್ರಶಸ್ತಿ ಗಳಿಸಿದ ನಾಲ್ವರು ಅಧಿಕಾರಿಗಳಲ್ಲಿ ಇವರೊಬ್ಬರು. 2013ರ ಚುನಾವಣೆಯ ಸಂದರ್ಭ ತರಬೇತಿಯಲ್ಲಿದ್ದು, ಮಂಡ್ಯದಲ್ಲಿ ನೋಡಲ್‌ ಅಧಿಕಾರಿಯಾಗಿ ದ್ದರು. ಕಲಿಕೆಯ ಅವಧಿಯಲ್ಲಿ ಐಎಎಸ್‌ ಅಕಾಡೆಮಿಯವರು ಉ.ಪ್ರ.ಚುನಾ ವಣೆಗೆ ಕರೆದೊಯ್ದ ತಂಡದಲ್ಲಿ ಹೆಪ್ಸಿಬಾ ಮತ್ತು ಜಿ.ಪಂ. ಸಿಇಒ ಸಿಂಧೂ ರೂಪೇಶ್‌ ಇದ್ದರು. ಬಸವಕಲ್ಯಾಣದ ಉಪ ವಿಭಾಗಾಧಿಕಾರಿ ಆಗಿದ್ದಾಗ ಸಹಾಯಕ ಚುನಾವಣಾಧಿಕಾರಿ ಆಗಿದ್ದರು.

ಜಿ.ಪಂ. ಸಿಇಒ ಸಿಂಧೂ ರೂಪೇಶ್‌ ಸ್ವೀಪ್‌ ಸಮಿತಿ ಅಧ್ಯಕ್ಷರಾಗಿ ಇದೇ ಮೊದಲ ಬಾರಿಗೆ ಚುನಾವಣೆಯನ್ನು ನಿಭಾಯಿಸು ತ್ತಿದ್ದಾರೆ. 2013ರ ಚುನಾವಣೆ ನಡೆದಾಗ ಪ್ರೊಬೆಶನರಿ ಅಧಿಕಾರಿಯಾಗಿ ಧಾರವಾಡದಲ್ಲಿ, 2014ರ ಚುನಾವಣೆ ನಡೆದಾಗತಿಪಟೂರಿನಲ್ಲಿ ಸಹಾಯಕ ಚುನಾವಣಾಧಿಕಾರಿಯಾಗಿದ್ದರು.

ಎಸ್‌ಪಿ ನಿಶಾ ಜೇಮ್ಸ್‌ ಇದೇ ಮೊದಲ ಬಾರಿ ಎಸ್‌ಪಿಯಾಗಿ ಚುನಾವಣೆಯ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹಿಂದೆ ಪ್ರೊಬೆಶನರಿ ಅವಧಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿ ನಲ್ಲಿ ಗ್ರಾ.ಪಂ. ಚುನಾವಣೆ, ಎಎಸ್‌ಪಿಯಾಗಿ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ತಾ.ಪಂ. ಚುನಾವಣೆಯನ್ನು ನಿಭಾಯಿಸಿದ್ದರು.

Advertisement

ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ 2008, 2009, 2013, 2014ರ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ; ಬೆಂಗಳೂರು ಮಹಾನಗರಪಾಲಿಕೆ ಚುನಾವಣೆ, ದಾವಣಗೆರೆ ಜಿ.ಪಂ. ಚುನಾವಣೆಯಲ್ಲಿ ವೀಕ್ಷಕರಾಗಿ; 2018ರ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಅಪರ ಜಿಲ್ಲಾಧಿಕಾರಿಯಾಗಿ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಹೀಗೆ ವಿವಿಧೆಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next