Advertisement

ಚುನಾವಣೆ ಅಕ್ರಮ: ಸಮುದ್ರದಲ್ಲೂ ಹದ್ದಿನಕಣ್ಣು, ಪ್ರತಿನಿತ್ಯ ಕಡಲಿನಲ್ಲಿ 5ರಿಂದ 8 ಗಂಟೆ ಗಸ್ತು

12:16 AM Apr 20, 2023 | Team Udayavani |

ಕುಂದಾಪುರ: ಚುನಾವಣೆ ಹಿನ್ನೆಲೆ ಯಲ್ಲಿ ರಸ್ತೆ ಮಾರ್ಗವಾಗಿ ಮಾತ್ರವಲ್ಲದೆ ಸಮುದ್ರದ ಮೂಲಕವೂ ಹಣ, ಹೆಂಡ, ಉಡುಗೊರೆಗಳನ್ನು ಸಾಗಿಸುವ ಅಪಾಯ ವಿರುವುದರಿಂದ ಸಮುದ್ರದಲ್ಲೂ ಅಕ್ರಮ ಗಳನ್ನು ತಡೆಯುವ ಸಲುವಾಗಿ ಕರಾವಳಿ ಕಾವಲು ಪಡೆಯ ಪೊಲೀಸರು ಹದ್ದಿನ ಕಣ್ಣು ಇರಿಸಿದ್ದಾರೆ. ಅಧಿಕೃತವಾಗಿ 159 ಕಡೆ ತಪಾಸಣೆ ನಡೆಸುತ್ತಿದ್ದು, ಇದಲ್ಲದೆ
ಇನ್ನು ಕೆಲವು ಕಡೆಗಳಲ್ಲಿಯೂ ನಿಗಾ ವಹಿಸಿದ್ದಾರೆ.

Advertisement

ರಾಜ್ಯಾದ್ಯಂತ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ಸಲುವಾಗಿ ವಿವಿಧೆಡೆ ಚೆಕ್‌ಪೋಸ್ಟ್‌ಗಳನ್ನು ತೆರೆದು ಅಕ್ರಮ ಗಳನ್ನು ತಡೆಯುವ ನಿಟ್ಟಿನಲ್ಲಿ ನಿಗಾ ವಹಿಸಲಾಗಿದೆ. ಅದೇ ರೀತಿ ಈಗ ಕಾರ ವಾರದಿಂದ ಕಾಸರಗೋಡಿನವರೆಗಿನ ಕರಾವಳಿ ತೀರದುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದೆ.

ಗಸ್ತು ಅವಧಿ ಹೆಚ್ಚಳ
ಕರಾವಳಿ ಕಾವಲು ಪಡೆ ಪೊಲೀಸರಿಂದ ಪ್ರತಿ ನಿತ್ಯ ಪ್ಯಾಟ್ರೋಲಿಂಗ್‌ (ಗಸ್ತು) ತಿರುಗುತ್ತಿದ್ದು, ಚುನಾವಣೆ ಸಮಯದಲ್ಲಿ ಈ ಅವಧಿಯನ್ನು ಹೆಚ್ಚಿಸಲಾಗಿದೆ. ನಿತ್ಯ 3 ಜಿಲ್ಲೆಗಳ ವಿವಿಧ ಕಾವಲು ಪಡೆ ಠಾಣೆಗಳ 12 ಬೋಟ್‌ಗಳಲ್ಲಿ 5 ರಿಂದ 8 ಗಂಟೆ ಗಸ್ತು ತಿರುಗಲಾಗುತ್ತಿದೆ.

ಕಾರವಾರ: ಒಂದು ಬೋಟ್‌ ಪತ್ತೆ
ನೀತಿ ಸಂಹಿತೆ ಆರಂಭವಾದ ಬಳಿಕ ಈ ತಪಾಸಣೆ ವೇಳೆ ಕಾರವಾರದಲ್ಲಿ ಬೋಟ್‌ವೊಂದರಲ್ಲಿ ಹೆಂಡ ಹಾಗೂ ಇನ್ನಿತರ ವಸ್ತುಗಳನ್ನು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ, ವಶಪಡಿಸಿಕೊಳ್ಳಲಾಗಿತ್ತು.

–  ಪ್ರಶಾಂತ್‌ ಪಾದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next