Advertisement

242 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ: ಜ್ಯೋತ್ಸ್ನಾ

02:47 PM Dec 01, 2020 | Suhan S |

ಕಲಬುರಗಿ: ರಾಜ್ಯಾದ್ಯಂತ ಗ್ರಾಮ ಪಂಚಾಯಿತಿಗಳಿಗೆ ಸೋಮವಾರ ಚುನಾವಣೆ ಘೋಷಣೆಯಾಗಿದ್ದು, ಜಿಲ್ಲೆಯಲ್ಲಿ 261 ಗ್ರಾಮ ಪಂಚಾಯಿತಿಗಳ ಪೈಕಿ 242 ಗ್ರಾಪಂಗಳಿಗೆ ನಡೆಯಲಿದೆ.

Advertisement

ರಾಜ್ಯ ಚುನಾವಣಾ ಆಯೋಗ ಆದೇಶ ಅನ್ವಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಈಗಾಗಲೇ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಡಿ.31ರ ಸಂಜೆ 5 ಗಂಟೆವರೆಗೆಜಾರಿಯಲ್ಲಿ ಇರಲಿದೆ. ಈ ಚುನಾವಣೆ ನೀತಿ ಸಂಹಿತೆಯು ಪಟ್ಟಣ ಪಂಚಾಯತಿ, ಪುರಸಭೆ,ನಗರಸಭೆ, ನಗರ ಪಾಲಿಕೆ ಹಾಗೂ ಮಹಾನಗರ ಪಾಲಿಕೆ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮತಪೆಟ್ಟಿಗೆ ಮೂಲಕ ಚುನಾವಣೆ ನಡೆಯಲಿದ್ದು, ಕೋವಿಡ್‌-19 ಕಾರಣ ಎರಡು ಹಂತದಲ್ಲಿ ನಡೆಸಲಾಗುತ್ತಿದೆ. ಮೊದಲನೇ ಹಂತದಲ್ಲಿ ಕಲಬುರಗಿ-28, ಆಳಂದ-36, ಅಫಜಲಪುರ-28, ಕಮಲಪುರ-16, ಕಾಳಗಿ-14 ಹಾಗೂ ಶಹಾಬಾದ ತಾಲೂಕಿನ 4 ಗ್ರಾಮ ಪಂಚಾಯಿತಿಗಳು ಸೇರಿದಂತೆ ಒಟ್ಟು 126 ಗ್ರಾಪಂಗಳಲ್ಲಿ ಚುನಾವಣೆ ನಡೆಯಲಿದೆ. ಎರಡನೇ ಹಂತದಲ್ಲಿ ಯಡ್ರಾಮಿ-15, ಜೇವರ್ಗಿ-23, ಚಿತ್ತಾಪುರ-24, ಚಿಂಚೋಳಿ-27 ಹಾಗೂ ಸೇಡಂ-27 ಸೇರಿ ಒಟ್ಟು 116 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ.  ಮೊದಲನೇ ಹಂತದ ಚುನಾವಣೆಗೆ ಡಿ.7 ಮತ್ತು ಎರಡನೇ ಹಂತದ ಚುನಾವಣೆಗೆ ಡಿ.11 ರಂದು ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ 242 ಗ್ರಾಮ ಪಂಚಾಯಿತಿಗಳ 1,427 ವಾರ್ಡ್‌ಗಳಲ್ಲಿ ಚುನಾವಣೆಗೆ ಜರುಗಲಿದೆ. 2020ರ ಆ.31ರ ಅರ್ಹ ಮತದಾರರ ಪಟ್ಟಿಯಂತೆ 6,76,421 ಪುರುಷರು, 6,49,872ಮಹಿಳೆಯರು ಹಾಗೂ 107 ಇತರ ಮತದಾರರು ಒಳಗೊಂಡಂತೆ ಒಟ್ಟು 13,26,400 ಮತದಾರರು ಮತ ಚಲಾಯಿಸಲು ಹಕ್ಕು ಹೊಂದಿದ್ದಾರೆ. ಮತದಾನ ಕಾರ್ಯಕ್ಕೆ 243 ರಿಟರ್ನಿಂಗ್‌ ಅಧಿಕಾರಿಗಳು, 243 ಸಹಾಯಕ ರಿಟರ್ನಿಂಗ್‌ ಅಧಿಕಾರಿಗಳು ಹಾಗೂ 52 ಹೆಚ್ಚುವರಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಇದಲ್ಲದೆ ಪ್ರತಿ ತಾಲೂಕಿನ 1-2 ಗ್ರಾಮ ಪಂಚಾಯಿತಿಗಳಿಗೆ ಓರ್ವ ತಾಲೂಕು ಮಟ್ಟದ ಅಧಿಕಾರಿಯನ್ನು ನೋಡಲ್‌ ಅಧಿಕಾರಿಯನ್ನಾಗಿಸಿ ನೇಮಿಸಿ ಚುನಾವಣೆ ನೀತಿ ಸಂಹಿತೆ ಮೇಲೆ ನಿಗಾ ವಹಿಸಲು ಸೂಚಿಸಲಾಗುವುದು ಹಾಗೂ ಪ್ರತಿ ತಾಲೂಕಿಗೆ ಒಬ್ಬರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸಹ ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಲಾಗುತ್ತದೆ ಎಂದು ವಿವರಿಸಿದ್ದಾರೆ.

ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಎಲ್ಲ ರಾಜಕೀಯ ಪಕ್ಷಗಳು, ಸಾರ್ವಜನಿಕರು ಚುನಾವಣಾ ಆಯೋಗಕ್ಕೆ ಅಗತ್ಯ ಸಹಕಾರ ನೀಡಬೇಕು. ದೋಷರಹಿತ ಚುನಾವಣೆ ನಡೆಸಲು ಅಧಿಕಾರಿಗಳು ವರ್ಗ ತಮಗೆ ನೀಡಲಾದ ಜವಾಬ್ದಾರಿ ಚಾಚು ತಪ್ಪದೇ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

Advertisement

19 ಗ್ರಾಪಂ ಚುನಾವಣೆ ಇಲ್ಲ :  ಡಿ.22ರಂದು ಮೊದಲ ಹಂತದಲ್ಲಿ 6 ತಾಲೂಕುಗಳು ಹಾಗೂ ಡಿ.27ರಂದು ಎರಡನೇ ಹಂತದಲ್ಲಿ 5 ತಾಲೂಕುಗಳಲ್ಲಿ ಚುನಾವಣೆ ನಡೆಯಲಿದೆ. 261ಗ್ರಾಪಂ ಪೈಕಿ 242 ಗ್ರಾಪಂಗಳಿಗೆ ನಡೆಯಲಿದೆ. ನ್ಯಾಯಾಲಯದಲ್ಲಿ ಪ್ರಕರಣ ಬಾಕಿ, ಅವಧಿ ಮುಕ್ತಾಯವಾಗದ ಹಾಗೂ ಇನ್ನಿತರ ಕಾರಣದಿಂದ 19 ಗ್ರಾಪಂಗಳ ಚುನಾವಣೆ ನಡೆಸುತ್ತಿಲ್ಲ. ಒಟ್ಟಾರೆ 1,499 ಮೂಲ ಮತಗಟ್ಟೆ, 342 ಆಕ್ಸಲರಿ ಮತಗಟ್ಟೆ ಸೇರಿ ಒಟ್ಟು 1,841 ಮತಗಟ್ಟೆ ಸ್ಥಾಪಿಸಲಾಗುತ್ತದೆ. – ವಿ.ವಿ.ಜ್ಯೋತ್ಸ್ನಾ,ಜಿಲ್ಲಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next