Advertisement

107 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ

07:00 AM Jul 22, 2018 | Team Udayavani |

ಬೆಂಗಳೂರು: ದೋಸ್ತಿ ಸರ್ಕಾರದ ಕುಸ್ತಿಗೆ ಅಖಾಡವಾಗಲಿರುವ 108 ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಲೇ ಲೋಕಸಭಾ ಚುನಾವಣೆಗೂ ಮುನ್ನ ಇನ್ನೂ 107 ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮರ ನಡೆಯಲಿದೆ.

Advertisement

2019ರ ಮಾರ್ಚ್‌ ಹಾಗೂ ಮೇ ತಿಂಗಳಲ್ಲಿ ಅವಧಿ ಪೂರ್ಣಗೊಳ್ಳಲಿರುವ ರಾಜ್ಯದ 107 ಸ್ಥಳೀಯ ಸಂಸ್ಥೆಗಳ ವಿವರಗಳನ್ನು ರಾಜ್ಯ ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸಿದೆ. 

ಅದರಂತೆ, 2019ರ ಮಾರ್ಚ್‌ ಹಾಗೂ ಮೇ ತಿಂಗಳಲ್ಲಿ ಅಧಿಕಾರವಧಿ ಮುಕ್ತಾಯಗೊಳ್ಳಲಿರುವ ಏಳು ಮಹಾನಗರ
ಪಾಲಿಕೆಗಳು, 28 ನಗರಸಭೆಗಳು, 43 ಪುರಸಭೆ ಹಾಗೂ 29 ಪಪಂಗೆ ಫೆಬ್ರವರಿ ತಿಂಗಳಲ್ಲಿ ಚುನಾವಣೆ ನಡೆಯಬೇಕಿದೆ. 2018ರ ಸೆಪ್ಟಂಬರ್‌ಗೆ ಅವಧಿ ಕೊನೆಗೊಳ್ಳಲಿರುವ 3 ಮಹಾನಗರ ಪಾಲಿಕೆಗಳು ಸೇರಿ ಒಟ್ಟು 108 ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದ್ದು, ಒಂದೆರಡು ದಿನಗಳಲ್ಲಿ ವಾರ್ಡ್‌ವಾರು ಮೀಸಲಾತಿ ಪಟ್ಟಿ ಪೂರ್ಣಗೊಳ್ಳಲಿದ್ದು,ಈ ವಾರದಲ್ಲಿ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆಯಿದೆ. ಈ ಮಧ್ಯೆ ಮೈಸೂರು ಮಹಾನಗರ ಪಾಲಿಕೆಯ 65, ಶಿವಮೊಗ್ಗ 35 ಹಾಗೂ ತುಮಕೂರು ಮಹಾನಗರ ಪಾಲಿಕೆಯ 35 ವಾರ್ಡ್‌ಗಳಿಗೆ ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ನಗರಾಭಿವೃದಿಟಛಿ ಇಲಾಖೆ ಪ್ರಕಟಿಸಿ, ಅಧಿಸೂಚನೆ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next