Advertisement

ಚುನಾವಣೆ: ಪೊಲೀಸರಿಂದ ರೌಡಿಗಳ ಪರೇಡ್‌

06:35 AM Mar 18, 2019 | |

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರೌಡಿಗಳು, ವಾರೆಂಟ್‌ ಜಾರಿಯಾಗಿರುವ ಆರೋಪಿಗಳು, ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳು ಸೇರಿ 800ಕ್ಕೂ ಹೆಚ್ಚು ಮಂದಿಯ ಮನೆಗಳ ಮೇಲೆ ಉತ್ತರ ವಿಭಾಗದ ಪೊಲೀಸರು ಭಾನುವಾರ ನಸುಕಿನಲ್ಲಿ ದಾಳಿ ನಡೆಸಿದರು.

Advertisement

ಉತ್ತರ ವಿಭಾಗದ ಡಿಸಿಪಿ ಎನ್‌. ಶಶಿಕುಮಾರ್‌ ನೇತೃತ್ವದಲ್ಲಿ ಯಶವಂತಪುರ, ಜಾಲಹಳ್ಳಿ, ಮಲ್ಲೇಶ್ವರ, ಶ್ರೀರಾಮಪುರ, ಆರ್‌ಎಂಸಿ ಯಾರ್ಡ್‌, ಪೀಣ್ಯ, ಗಂಗಮ್ಮನಗುಡಿ, ಹೆಬ್ಟಾಳ, ವಿದ್ಯಾರಣ್ಯಪುರ, ರಾಜಾಜಿನಗರ, ಸುಬ್ರಹ್ಮಣ್ಯಪುರ ಸೇರಿ ಉತ್ತರ ವಿಭಾಗದ 18 ಠಾಣೆಗಳ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 11 ಗಂಟೆಯಿಂದ ಭಾನುವಾರ ಮುಂಜಾನೆ ಐದು ಗಂಟೆವರೆಗೂ ಎಲ್ಲ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಲಾಯಿತು. ಬಳಿಕ ಜಾಲಹಳ್ಳಿ ಠಾಣಾ ವ್ಯಾಪ್ತಿಯ ಬಿಇಎಲ್‌ ಮೈದಾನದಲ್ಲಿ ಎಲ್ಲ ರೌಡಿಗಳ ಪರೇಡ್‌ ನಡೆಸಲಾಯಿತು.

ಈ ವೇಳೆ ಮುಂಬರುವ ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಯಲ್ಲಿ ತೊಡಗಬಾರದು. ಮತದಾರರಿಗೆ ಬೆದರಿಕೆ ಹಾಕುವುದು, ಮತದಾನದ ದಿನ ಮತದಾರರ ಮೇಲೆ ದಬ್ಟಾಳಿಕೆ ನಡೆಸುವುದು, ಅಕ್ರಮ ಕೃತ್ಯಗಳಲ್ಲಿ ತೊಡಗಿದರೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಶಶಿಕುಮಾರ್‌ ಎಚ್ಚರಿಕೆ ನೀಡಿದರು. ಬಳಿಕ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಯಿತು.

ಅಲ್ಲದೆ, ಪರೇಡ್‌ನ‌ಲ್ಲಿ ಭಾಗಿಯಾದ ಎಲ್ಲ ಆರೋಪಿಗಳ ಮೊಬೈಲ್‌ ನಂಬರ್‌, ವಿಳಾಸ, ಸಂಬಂಧಿಕರ ವಿವರ ಹಾಗೂ ಇತರೆ ಮಾಹಿತಿಗಳನ್ನು ಪಡೆದುಕೊಳ್ಳಲಾಯಿತು. ಒಂದು ವೇಳೆ ಚುನಾವಣೆ ವೇಳೆ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದರೆ, ಜಾಮೀನು ರಹಿತ ವಾರೆಂಟ್‌ನಡಿ ಬಂಧಿಸುವುದಲ್ಲದೆ, ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕಾಗುತ್ತದೆ. 

ಇದೇ ವೇಳೆ ರೌಡಿಗಳ ಉದ್ದುದ್ದ ಗಡ್ಡ, ಮೀಸೆ, ಕೂದಲಿಗೆ ಸ್ಥಳದಲ್ಲಿ ಕತ್ತರಿ ಹಾಕಲಾಯಿತು. ಅಕ್ರಮ ಚಟುವಟಿಕೆಗಳಲ್ಲಿ ತೊಡಗದೆ ಉತ್ತಮ ಜೀವನ ನಡೆಸುತ್ತಿರುವ ರೌಡಿಗಳನ್ನು ರೌಡಿಪಟ್ಟಿಯಿಂದ ಕೈಬಿಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಡಿಸಿಪಿ ಎನ್‌.ಶಶಿಕುಮಾರ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next