Advertisement

ಚುನಾವಣೆ ಖರ್ಚು: ಅಭ್ಯರ್ಥಿಗಳಿಗೆ ನುಂಗಲಾರದ ತುತ್ತು

06:08 PM Dec 16, 2020 | Adarsha |

ಆಳಂದ: ಚುನಾವಣೆಗೆ ನಿಂತ ಅಭ್ಯರ್ಥಿಗಳು ಹಿಂದಿನ ಚುನಾವಣೆಗಳಲ್ಲಿ ಎಂಟತ್ತು ಸಾವಿರ ರೂಪಾಯಿ ಖರ್ಚು ಮಾಡುತ್ತಿದ್ದರು. ಆದರೀಗ ಮೂರ್‍ನಾಲ್ಕು ಲಕ್ಷ ರೂ. ಖರ್ಚು ಮಾಡುವಂತಾಗಿದ್ದು, ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಚುನಾವಣೆಗೆ ನಿಂತವರು ತಮ್ಮ ಬೆಂಬಲಿಗರಿಗೆ ಚಹಾ-ಚೂಡಾ ನೀಡಿ ಮನೆ-ಮನೆಗಳಿಗೆ ತೆರಳಿ ಮತ ಕೇಳುವ ಕಾಲವೊಂದಿತ್ತು.

Advertisement

ಆದರೀಗ ಬೆಂಬಲಿಗರು, ಮತದಾರರು ದಾಬಾ-ಹೋಟೆಲ್‌ಗ‌ಳಲ್ಲೇ ಊಟ ಮಾಡಿಸಬೇಕು ಎನ್ನವಷ್ಟರ ಮಟ್ಟಿಗೆದುಂಬಾಲು ಬೀಳುತ್ತಿದ್ದಾರೆ. ಇದರಿಂದ ಖರ್ಚು ಹೆಚ್ಚುತ್ತಲೇ ಹೋಗುತ್ತಿದೆ. ಹೀಗಾಗಿ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಸ್ಪರ್ಧೆಯೇ ಬೇಡ, ಅವಿರೋಧ ಆಯ್ಕೆಯೆ ಉತ್ತಮ ಎನ್ನುವ ನಿರ್ಧಾರಕ್ಕೆ ಬರುತ್ತಿದ್ದಾರೆ. ರಾಜಕೀಯ ಪ್ರತಿಷ್ಠೆ ಇರುವಂತ ಕ್ಷೇತ್ರಗಳಲ್ಲಿ ಮಾತ್ರ ಚುನಾವಣೆ ನಡೆಯುತ್ತಿವೆ.

ಏನಂತರಾರೆ ಹಿರಿಯ-ಕಿರಿಯರು: 20  ವರ್ಷಗಳ ಹಿಂದೆ ಎಂಟು ಸಾವಿರ ರೂ. ಖರ್ಚು ಮಾಡಿ ಗೆದ್ದು, ಅಧ್ಯಕ್ಷನಾಗಿದ್ದೆ. ಆದರೆ ಈಗ ಚುನಾವಣೆ ನಿಂತವರಿಗೆ ಕನಿಷ್ಠ ಮೂರ್‍ನಾಲ್ಕು ಲಕ್ಷ ರೂ. ಖರ್ಚಾಗುತ್ತಿದೆ. ಆಗ ಕರಪತ್ರಕ್ಕೆ ಮಾತ್ರ ಹಣ ಖರ್ಚಾಗುತ್ತಿತ್ತು. ಮತದಾರರು ಹಣ, ಸಾರಾಯಿ ಆಸೆ ಪಟ್ಟಿರಲಿಲ್ಲ. ಈಗ ಇದು ಕಡ್ಡಾಯ ಎನ್ನುವಂತಾಗಿದೆ. ಹೀಗಾಗಿ ಸ್ಪರ್ಧಾಳುಗಳು ಖರ್ಚು ಮಾಡುವುದು ಅನಿವಾರ್ಯ ಎನ್ನುವಂತಾಗಿದೆ ಎನ್ನುತ್ತಾರೆ ಕೊರಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂ ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ.

ಇದನ್ನೂ ಓದಿ:ಗ್ರಾ.ಪಂಗೆ 141 ಸದಸ್ಯರು ಅವಿರೋಧ ಆಯ್ಕೆ

ಹಣವಿಲ್ಲದೆ ಗೆದ್ದಿದ್ದೆ: ಜನಪರ ಕೆಲಸ ಮಾಡಿದ್ದ ನಾವು 10 ವರ್ಷಗಳ ಹಿಂದೆ ಚುನಾವಣೆಗೆ ಸ್ಪ ರ್ಧಿಸಿದಾಗ ಎಲ್ಲ ಖರ್ಚು-ವೆಚ್ಚಗಳನ್ನು ಜನರೆ ನೋಡಿಕೊಂಡಿದ್ದರು. ಯಾವುದೇ ಖರ್ಚಿಲ್ಲದೆ ಗ್ರಾ.ಪಂ ಸದಸ್ಯನಾಗಿ ಆಯ್ಕೆಯಾಗಿದ್ದೆ. ಹಣ ಮಾಡಲು ರಾಜಕೀಯಕ್ಕೆ ಬರುವವರು ಹಣ ಸುರುವಿ, ಜನರ ದಿಕ್ಕು ತಪ್ಪಿಸಿ ಭ್ರಷ್ಟಾಚಾರ ಮಾಡುತ್ತಿದ್ದಾರೆ.

Advertisement

ಚುನಾವಣೆ ನಿಯಮಗಳು ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು ಎಂದು ಕಿಸಾನಸಭಾ ಜಿಲ್ಲಾ ಅಧ್ಯಕ್ಷ ಹಾಗೂ ತಡೋಳಾ ಗ್ರಾ.ಪಂ ಮಾಜಿ ಸದಸ್ಯ ಮೌಲಾ ಮುಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಾರದರ್ಶಕ ಚುನಾವಣೆ ನಡೆಯಲಿ: ಮತದಾರರು ಜನಪರ ಕೆಲಸ ಮಾಡುವ ವ್ಯಕ್ತಿಗಳನ್ನು ಪಕ್ಷ, ಜಾತಿ ನೋಡದೆ ಗೆಲ್ಲಿಸಬೇಕು. ಚುನಾವಣೆ ಆಯೋಗ ನೀತಿ ಸಂಹಿತೆ ಜಾರಿಗೊಳಿಸಿದರೆ ಸಾಲದು, ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಮಾಡಬೇಕು ಎಂದು ನಿಂಬರಗಾ ಹೋರಾಟಗಾರ ಬಸವರಾಜ ಯಳಸಂಗಿ ಸಲಹೆ ನೀಡಿದ್ದಾರೆ.

ಗ್ರಾ.ಪಂ ಚುನಾವಣೆಗಳು ಪಕ್ಷಾತೀತವಾಗಿ ನಡೆಯುತ್ತವೆ. ಯಾವುದೇ ರಾಜಕೀಯ ಪಕ್ಷಗಳು ಬ್ಯಾನರ್‌ ಅಥವಾ ಕರಪತ್ರ, ಸಭೆ, ಸಮಾರಂಭದ ಮೂಲಕ ಮತದಾರರ ಮೇಲೆ ಒತ್ತಡ ಹಾಕುವಂತ್ತಿಲ್ಲ. ಪಕ್ಷದ ಚಿನ್ನೆಗಳಡಿ ಪ್ರಚಾರ ಮಾಡುವಂತ್ತಿಲ್ಲ. ಸ್ಪರ್ದಿಸುವ ಅಭ್ಯರ್ಥಿಗಳಿಗೆ ಚುನಾವಣೆ ನೀತಿ ಸಂಹಿತೆ ಮಾಹಿತಿ ನೀಡಲಾಗಿದೆ. ಅದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಯಲ್ಲಪ್ಪ ಸುಬೇದಾರ, ತಹಶೀಲ್ದಾರ್‌

ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next