Advertisement

ಸೋಲನ್ನು ಸವಾಲಾಗಿ ಸ್ವೀಕರಿಸಲು ರಮಾನಾಥ ರೈ ಕರೆ

12:37 PM May 31, 2018 | |

ಮಹಾನಗರ : ಪಕ್ಷಕ್ಕೆ ಕಳೆದ ಚುನಾವಣೆ ಹಿನ್ನಡೆಯು ಅಪಪ್ರಚಾರವೂ ಸಹಿತ ಬೇರೆ ಬೇರೆ ಕಾರಣಗಳಿಂದಾಗಿ
ಸೋಲಾಗಿದ್ದು, ಈ ಸೋಲು ಶಾಶ್ವತವಲ್ಲ. ಮತ್ತೇ ಕಾಂಗ್ರೆಸ್‌ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಜಿಲ್ಲಾ ಕಾಂಗ್ರೆಸ್‌ ಸಭೆಯ ವತಿಯಿಂದ ಮಲ್ಲಿಕಟ್ಟೆಯ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಚುನಾವಣಾ ಸೋಲಿನ ಬಗ್ಗೆ ವಿಮರ್ಶಿಸಲು ಜಿಲ್ಲಾ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಚುನಾವಣೆಯ ಸೋಲು ಒಪ್ಪಿಕೊಂಡು ನಾವು ಧೃತಿಗೆಡಬಾರದು. ಕಾರ್ಯಕರ್ತರು ಸೋಲಿನ ಬಗ್ಗೆ ಆತ್ಮವಿಮರ್ಶೆ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ಪಕ್ಷದ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಲು ಕಾಂಗ್ರೆಸ್‌ನ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಕಾರ್ಯಪ್ರವೃತ್ತರಾಗುವಂತೆ ಕರೆ ನೀಡಿದರು.

ಬಡವರಿಗೆ ಸರಕಾರ ಉತ್ತಮ ಕಾರ್ಯಕ್ರಮಗಳನ್ನು ನೀಡಿದರೂ ಕೂಡ ಈ ಬಗ್ಗೆ ಪ್ರಚಾರ ಮಾಡಲು ಪಕ್ಷದ ಕಾರ್ಯಕರ್ತರು ಮುತುವರ್ಜಿ ವಹಿಸದಿರುವುದೇ ಕಾರಣವಾಗಿದ್ದಲ್ಲದೇ ಬಿಜೆಪಿ ಹಿಂದುತ್ವದ ನೆಲೆಯಲ್ಲಿ ಮತಗಳನ್ನು ವಿಭಜನೆ ಮಾಡಿರುವುದರಿಂದ ಬಿಜೆ ಪಿಗೆ ಭಾರತೀಯ ಪಕ್ಷಕ್ಕೆ ತಾತ್ಕಾಲಿಕ ಗೆಲುವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ಸರಕಾರವನ್ನು ವಚನಭ್ರಷ್ಟ ಸರಕಾರ ಎಂದು ಹೇಳಿರುವುದು ಶೋಚನೀಯ. ಅವರು ಪ್ರಣಾಳಿಕೆಯಲ್ಲಿ ಹೇಳಿದಂತಹ ಯಾವುದೇ ಕಾರ್ಯಕ್ರಮಗಳನ್ನು ಜಾರಿಗೊಳಿಸದೇ ಇರುವುದರಿಂದ ಮೋದಿ ನೇತೃತ್ವದ ಸರಕಾರವನ್ನು ವಚನಭ್ರಷ್ಟ ಸರಕಾರ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತರು ಕೇಂದ್ರ ಸರಕಾರವನ್ನು ಬದಲಿಸಿ ಕಾಂಗ್ರೆಸ್‌ ಗೆಲ್ಲಿಸಿ ಎಂದು ಘೋಷಣೆ
ಕೂಗುವಂತೆ ಕರೆ ನೀಡಿದರು.

Advertisement

ಆತ್ಮಸ್ಥೈರ್ಯ ಕುಗ್ಗದಿರಲಿ
ಹರೀಶ್‌ ಕುಮಾರ್‌ ಮಾತನಾಡಿ, ಚುನಾವಣೆಯಲ್ಲಿ ಆಗಿರುವ ಸೋಲನ್ನು ಸ್ವೀಕರಿಸಿ ಇವಿಎಂ ಯಂತ್ರದ ಬಗ್ಗೆ ಬಹಳಷ್ಟು ಸಮಸ್ಯೆಗಳಿದ್ದು, ಈ ಬಗ್ಗೆ ಕೆ.ಪಿ.ಸಿ.ಸಿ. ಮತ್ತು ಎ.ಐ.ಸಿ.ಸಿ. ಖಚಿತಪಡಿಸಿ ಚುನಾವಣೆ ಆಯೋಗಕ್ಕೆ ತಿಳಿಸಿದರೂ ಚುನಾವಣೆಯಲ್ಲಿ ಇವಿಎಂ ಯಂತ್ರ ಉಪಯೋಗಿಸಿದ್ದರಿಂದ ಮತ್ತು ಹಿಂದುತ್ವದ ಮತಗಳನ್ನು ಬಿಜೆಪಿ ಅಪಪ್ರಚಾರ ಮಾಡಿ ವಿಭಜನೆ ಮಾಡಿರುವುದರಿಂದ ಮತ್ತು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಮನೆ, ಕಚೇರಿಗಳಿಗೆ ಆದಾಯ ತೆರಿಗೆ ದಾಳಿ ನಡೆಸಿ ಅಭ್ಯರ್ಥಿಗಳ ಆತ್ಮಸ್ಥೆರ್ಯವನ್ನು ಕುಂದಿಸಿರುವುದರಿಂದ ಚುನಾಚಣೆಯಲ್ಲಿ ಸೋಲಾಗಿದೆ ಎಂದು
ಹೇಳಿದರು.

ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ. ಮಂಜುನಾಥ್‌ ಕುಮಾರ್‌ ಮತ್ತು ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ
ಎಂ.ಪಿ. ದಿನೇಶ್‌ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.

ಮಾಜಿ ಶಾಸಕರಾದ ಅಭಯಚಂದ್ರ ಜೈನ್‌, ಗಂಗಾಧರ್‌ ಗೌಡ, ಜೆ.ಆರ್‌. ಲೋಬೋ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಪಿ.ವಿ ಮೋಹನ್‌, ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಂ.ಎಸ್‌. ಮಹಮ್ಮದ್‌, ಮಮತಾ ಗಟ್ಟಿ, ಇಬ್ರಾಹಿಂ ಕೋಡಿಜಾಲ್‌, ಧನಂಜಯ ಅಡ್ಪಂಗಾಯ, ಆರ್‌.ಕೆ. ಪೃಥ್ವಿರಾಜ್‌, ಈಶ್ವರ್‌ ಉಲ್ಲಾಳ್‌, ಶಾಹುಲ್‌ ಹಮೀದ್‌, ಶೇಖರ್‌ ಕುಕ್ಕೇಡಿ, ಸುರೇಶ್‌ ಬಲ್ಲಾಳ್‌, ಶಾಲೆಟ್‌ ಪಿಂಟೋ, ಉಮಾ ನಾಥ್‌ ಶೆಟ್ಟಿ, ಲೋಕೇಶ್‌ ಹೆಗ್ಡೆ, ಎ.ಸಿ. ಭಂಡಾರಿ, ಅಬ್ದುಲ್ಲಾ ಬಿನ್ನು, ಸೇವಾದಳ ಅಶ್ರಫ್‌, ಬ್ಲಾಕ್‌ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್‌ ಪದಾಧಿಕಾರಿಗಳು, ಜಿಲ್ಲಾ ಯುವ ಕಾಂಗ್ರೆಸ್‌ ಮತ್ತು ಮಹಿಳಾ ಕಾಂಗ್ರೆಸ್‌ ಪದಾಧಿಕಾರಿಗಳು, ಪಾಲಿಕೆ ಸದಸ್ಯರು, ಜಿ.ಪಂ.ಸದಸ್ಯರು, ತಾ.ಪಂ. ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು. ಸದಾಶಿವ್‌ ಉಲ್ಲಾಳ್‌ ಅವರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next