ಸಕಲೇಶಪುರ: ಮತಗಟ್ಟೆಗಳ ಆಧಾರ ದಲ್ಲಿ ಚುನಾವಣೆ ಫಲಿತಾಂಶವನ್ನು ನೀಡುವುದರಿಂದ ಹಲವು ಗ್ರಾಮಗಳು ಅಭಿವೃದ್ಧಿಯಿಂದ ವಂಚಿತವಾಗುತ್ತಿದ್ದು ಆದ್ದರಿಂದ ಮತಗಟ್ಟೆಗಳ ಚುನಾವಣೆ ಫಲಿತಾಂಶವನ್ನು ನೀಡುವುದು ಬೇಡ ಎಂಬ ಕೂಗು ತಾಲೂಕಿನ ಹಲವೆಡೆ ಕೇಳಿ ಬರುತ್ತಿದೆ.
ಅಭಿವೃದ್ಧಿ ಮರೀಚಿಕೆ: ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಗರಹಳ್ಳಿ, ಬೊಮ್ಮನಕೆರೆ ಸೇರಿದಂತೆ ಹಲವು ಗ್ರಾಮಗಳು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಅಭಿವೃದ್ಧಿ ಯಿಂದ ವಂಚಿತವಾಗಿರುವುದು ಆತಂಕ ಕಾರಿ ಸಂಗತಿಯಾಗಿದೆ. ತಾಲೂಕಿನ ಬ್ಯಾಕರವಳ್ಳಿ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳ ಮತದಾರರು ಬಿಜೆಪಿ ಪರವಿರುವುದರಿಂದ ಪ್ರತಿ ಚುನಾವಣೆಯಲ್ಲಿ ಈ ಭಾಗದಲ್ಲಿ ಆಡಳಿತಾರೂಢ ಜೆಡಿಎಸ್‌ಗೆ ಹಿನ್ನೆಡೆ ಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಸ ಕರು ಈ ಪಂಚಾಯಿತಿಯ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿ ದ್ದಾರೆಂಬ ಮಾತುಗಳು ಕೇಳಿ ಬರುತ್ತಿದೆ.
ರಸ್ತೆಗಳ ದುರವಸ್ಥೆ: ಬಿ.ಬಿ.ಶಿವಪ್ಪನವರು ಸುಮಾರು 15 ವರ್ಷಗಳ ಹಿಂದೆ ಶಾಸಕ ರಾಗಿದ್ದಾಗ ಈ ಭಾಗದಲ್ಲಿ ರಸ್ತೆಗಳು ದುರಸ್ತಿಯಾಗಿದ್ದವು. ನಂತರ ಈ ಭಾಗದ ರಸ್ತೆಗಳ ಸಣ್ಣಪುಟ್ಟ ಗುಂಡಿಗಳನ್ನು ಮುಚ್ಚಿ ಗುತ್ತಿಗೆದಾರರ ಜೇಬು ತುಂಬಿರುವುದು ಬಿಟ್ಟರೆ ಇನ್ನೇನೂ ಪ್ರಯೋಜನವಾಗಿಲ್ಲ. ಬ್ಯಾಕರವಳ್ಳಿ ಪಂಚಾಯಿತಿ ವ್ಯಾಪ್ತಿಯ ಕಾಮನ ಹಳ್ಳಿ ರಸ್ತೆ, ಸುಳ್ಳಕ್ಕಿ-ಕೊಣ್ಣೂರು ಒಳ ರಸ್ತೆ, ಅರೆಕೆರೆ ಮುಖ್ಯ ರಸ್ತೆ, ಸೇರಿ ದಂತೆ ಇನ್ನು ಹಲವು ರಸ್ತೆಗಳು ಇಲ್ಲಿಯ ವರೆಗೆ ದುರಸ್ತಿ ಯಾಗಿಲ್ಲ. ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಸಹ ಇದ್ದು ಇದನ್ನು ಸಹ ಬಗೆಹರಿಸಿರುವುದಿಲ್ಲ. ಎತ್ತಿನಹೊಳೆ ಯೋಜನೆಯಲ್ಲಿ ಹಲವು ಒಳ ಗ್ರಾಮಗಳ ರಸ್ತೆಗಳೇ ದುರಸ್ತಿ ಯಾಗಿದ್ದು ಆದರೆ ಈ ಭಾಗಕ್ಕೆ ಎತ್ತಿನ ಹೊಳೆ ಯೋಜನೆಯ ಯಾವುದೇ ಅನುದಾನ ಸಿಕ್ಕಿರುವುದಿಲ್ಲ.
ರಾಜಕೀಯ ದ್ವೇಷ: ಈ ಹಿನ್ನೆಲೆಯಲ್ಲಿ ಮುಂಬರುವ ಚುನಾವಣಾ ಫಲಿತಾಂಶ ವನ್ನು ಮತಗಟ್ಟೆ ಆಧಾರದಲ್ಲಿ ಪ್ರಕಟಿಸ ಬಾರದು ಎಂಬ ಕೂಗು ತಾಲೂಕಿನ ಹಲವೆಡೆ ಕೇಳಿ ಬರುತ್ತಿದೆ. ರಾಜಕೀಯ ದ್ವೇಷದಿಂದ ಕೇವಲ ಅಭಿವೃದ್ಧಿ ಕಾರ್ಯ ಗಳಿಂದ ಹಲವು ಗ್ರಾಮಗಳು ವಂಚಿತ ವಾಗುವುದು ಮಾತ್ರವಲ್ಲದೇ ಹಲವು ಗ್ರಾಮಗಳಲ್ಲಿ ರಾಜಕೀಯ ವೈರತ್ವ ಹುಟ್ಟಿ ಗ್ರಾಮದ ಜನ ವಿಭಜನೆಗೊಳ್ಳುವ ಪರಿ ಸ್ಥಿತಿ ನಿರ್ಮಾಣವಾಗುತ್ತಿರುವುದರಿಂದ ಮತಗಟ್ಟೆ ಆಧಾರದಲ್ಲಿ ಚುನಾವಣೆ ಫಲಿ ತಾಂಶ ಪ್ರಕಟಿಸಬಾರದು ಎಂದು ಪ್ರಜ್ಞಾ ವಂತರು ಅಭಿಪ್ರಾಯ ಪಡುತ್ತಿದ್ದಾರೆ.
● ಸುಧೀರ್ ಎಸ್.ಎಲ್