Advertisement

Election result ಅನಿಶ್ಚಿತತೆ: 1,062 ಅಂಕ ಕುಸಿದ ಸೆನ್ಸೆಕ್ಸ್‌

01:12 AM May 10, 2024 | |

ಮುಂಬಯಿ: ಲೋಕಸಭೆ ಚುನಾವಣ ಫ‌ಲಿತಾಂಶದ ಅನಿಶ್ಚಿತತೆಯು ಷೇರುಪೇಟೆ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ಹೂಡಿಕೆದಾರರು ಷೇರು ಖರೀದಿ ಯಲ್ಲಿ ಆಸಕ್ತಿ ವಹಿಸದ ಕಾರಣ ಸೆನ್ಸೆಕ್ಸ್‌ ಬರೋಬ್ಬರಿ 1,062 ಅಂಕ ಕುಸಿದು, ದಿನಾಂತ್ಯಕ್ಕೆ 72,404ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 345 ಅಂಕ ಕುಸಿದು, 21,957ರಲ್ಲಿ ಕೊನೆಗೊಂಡಿದೆ. ಪರಿಣಾಮವೆಂಬಂತೆ, ಹೂಡಿಕೆದಾರರಿಗೆ ಒಂದೇ ದಿನ 7.34 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳ ಮಾರಾಟ, ಕಂಪೆನಿಗಳ 4ನೇ ತ್ತೈಮಾಸಿಕದ ಫ‌ಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಇಲ್ಲದೇ ಇರುವುದು ಕೂಡ ಸೆನ್ಸೆಕ್ಸ್‌ ಪತನಕ್ಕೆ ಕಾರಣ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next