Advertisement

Election Result: ನಿತೀಶ್‌, ನಾಯ್ಡುಗೆ ಇಂಡಿಯಾ, ಎನ್‌ಡಿಎ ಮೈತ್ರಿಕೂಟ ಗಾಳ!

09:01 PM Jun 04, 2024 | Team Udayavani |

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಏಕೈಕ ಪಕ್ಷ ಬಹುಮತ ಗಳಿಸದ ಹಿನ್ನೆಲೆಯಲ್ಲಿ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರಿಗೆ ಉಭಯ ಮೈತ್ರಿಕೂಟಗಳು ಗಾಳ ಹಾಕಿವೆ. ಈ ಇಬ್ಬರು ನಾಯಕರು ಈ ಬಾರಿ ಅಚ್ಚರಿಯೆಂಬಂತೆ, “ಕಿಂಗ್‌ಮೇಕರ್‌’ಗಳಾಗಿ ಹೊರಹೊಮ್ಮಿದ್ದಾರೆ.

Advertisement

ನಿತೀಶ್‌ ಮತ್ತು ನಾಯ್ಡು ಇತ್ತೀಚಿಗಷ್ಟೇ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿದ್ದರು. ಹೀಗಾಗಿ ಚುನಾವಣೆ ಫ‌ಲಿತಾಂಶ ಪ್ರಕಟವಾಗುತ್ತಿದ್ದಂತೆ ಉಭಯ ಮೈತ್ರಿಕೂಟಗಳ ನಾಯಕರು ಈ ಇಬ್ಬರು ನಾಯಕರಿಗೆ ಫೋನ್‌ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಹೇಗಾದರೂ ಮಾಡಿ ನಿತೀಶ್‌ ಹಾಗೂ ನಾಯ್ಡು ಅವರನ್ನು ಸೆಳೆಯಲು ಇಂಡಿಯಾ ಒಕ್ಕೂಟದ ನಾಯಕರು ಯತ್ನಿಸಿದರೆ, ತಮ್ಮಲ್ಲೇ ಉಳಿಸಿಕೊಳ್ಳಲು ಎನ್‌ಡಿಎ ನಾಯಕರು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ನಿತೀಶ್‌ ಕುಮಾರ್‌ ಫೋನ್‌:

ಇಂಡಿಯಾ ಮೈತ್ರಿಕೂಟವನ್ನು 272ರ ಗಡಿ ದಾಟಿಸುವ ಉದ್ದೇಶದೊಂದಿಗೆ ಎನ್‌ಸಿಪಿ ನಾಯಕ ಶರದ್‌ ಪವಾರ್‌ ಇಬ್ಬರು ನಾಯಕರಿಗೂ ಕರೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ವರದಿಯನ್ನು ತಳ್ಳಿ ಹಾಕಿರುವ ನಿತೀಶ್‌ ಯಾರಿಗೂ ಕರೆ ಮಾಡಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next