ಬೆಂಗಳೂರು: ತೀವ್ರ ಕುತೂಹಲ ಮತ್ತು ಆತಂಕದ ಗೂಡಾದ ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಚುನಾವಣಾ ಆಯೋಗ ತಡರಾತ್ರಿ 12.30ರ ವೇಳೆ ಪ್ರಕಟಿಸಿದೆ.
ಹಲವು ಬಾರಿ ಮರು ಎಣಿಕೆಯ ಬಳಿಕ 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮೂರ್ತಿಗೆ ನಿಚ್ಚಳ ಗೆಲುವು ಸಾಧಿಸಿದ್ದಾರೆ .
ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮೂರ್ತಿಗೆ 57,797 ಮತಗಳು ಮತ್ತು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿಗೆ 57,781 ಮತ ಲಭಿಸಿದೆ.
Related Articles
ಕರ್ನಾಟಕ ರಾಜ್ಯದಲ್ಲಿ 224 ಸ್ಥಾನಗಳಿಗೆ ನಡೆದ ವಿಧಾನಸಭಾ ಚುನಾವಣೆಯ ಅಂತಿಮ ಫಲಿತಾಂಶವನ್ನು ಕೇಂದ್ರ ಚುನಾವಣಾ ಆಯೋಗ ಅಂತಿಮವಾಗಿ ಪ್ರಕಟಿಸಿದೆ.
224 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ 135,ಬಿಜೆಪಿ 66, ಜೆಡಿಎಸ್ 19,ಪಕ್ಷೇತರ 4 ಕ್ಷೇತ್ರಗಳಲ್ಲಿ ಗೆಲುವು ಪಡೆದಿದೆ.