Advertisement

ಫಲಿತಾಂಶ:ಗೋವಾ,ಉತ್ತರಾಖಂಡಕ್ಕೆ ರಾಜ್ಯ ಕಾಂಗ್ರೆಸ್ ಬಾಹುಬಲಿಗಳು

04:54 PM Mar 08, 2022 | Team Udayavani |

ಬೆಂಗಳೂರು: ಗೋವಾ ಹಾಗೂ ಉತ್ತರಾಖಂಡ್ ದಲ್ಲಿ ಕಾಂಗ್ರೆಸ್ ಗೆಲುವಿನ ಸನಿಹ ಬಂದಿದೆ ಎಂದು ಎಕ್ಸಿಟ್ ಫೋಲ್ ಗಳಲ್ಲಿ ಬಂದ ಅಭಿಪ್ರಾಯ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಪ್ರಮುಖ ನಾಯಕರನ್ನು ಈ ಎರಡು ರಾಜ್ಯದಲ್ಲಿ ಸರಕಾರ ರಚಿಸುವ ಕಸರತ್ತಿಗೆ ನಿಯೋಜಿಸಿದೆ.

Advertisement

ಈ ಎರಡೂ ರಾಜ್ಯಗಳಲ್ಲಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ “ಆಪರೇಷನ್ ಕಮಲ” ಕಾರ್ಯಾಚರಣೆ ನಡೆಯಬಹುದೆಂದು ಕಾಂಗ್ರೆಸ್ ಊಹಿಸಿದೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ತಂತ್ರಗಾರಿಕೆ ಆರಂಭಿಸಿದೆ.

ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಮಹಾರಾಷ್ಟ್ರದ ಸಚಿವರೊಬ್ಬರನ್ನು ಶಾಸಕರನ್ನು ಕಾಯುವುದಕ್ಕೆ ನಿಯೋಜನೆ ಮಾಡಲಾಗಿದೆ.

ಇನ್ನೊಂದೆಡೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ರಾಜಸ್ಥಾನದ ಪ್ರಮುಖ ನಾಯಕರನ್ನು ಉತ್ತರಾಖಂಡದಲ್ಲಿ ಶಾಸಕರ ತಲೆ ಕಾಯುವುದಕ್ಕೆ ನಿಯೋಜನೆ ಮಾಡಲಾಗಿದೆ. ಕನಿಷ್ಠ ಎರಡು ರಾಜ್ಯಗಳಲ್ಲಿ ಸರಕಾರ ರಚನೆ ಮಾಡಬೇಕೆಂಬ ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್ ಸಾಧ್ಯವಿರುವ ಎಲ್ಲ ತಂತ್ರಗಾರಿಕೆಗಳನ್ನು ಪ್ರಯೋಗ ಮಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next