Advertisement

ಪ್ರಗತಿಗೆ ಚುನಾವಣೆಯೇ ಅಡ್ಡಿ

12:30 AM Jan 05, 2019 | Team Udayavani |

ಹೊಸದಿಲ್ಲಿ: 2018ರಲ್ಲಿ ವಿಶ್ವದ ಬಹುತೇಕ ಆರ್ಥಿಕತೆಗಿಂತ ಹೆಚ್ಚು ವೇಗವಾಗಿ ಭಾರತ ಅಭಿವೃದ್ಧಿ ಕಾಣುತ್ತಿದೆಯಾದರೂ, ಇಂಗ್ಲೆಂಡ್‌ ಅನ್ನು ಮೀರಿಸಿ 5ನೇ ಆರ್ಥಿಕತೆಯಾಗಿ ಹೊರಹೊಮ್ಮಲು ಚುನಾವಣೆ ಅಡ್ಡಿಯಾಗಿದೆ ಎಂದು ಹೇಳಲಾಗುತ್ತಿದೆ. ಮುಂಬರುವ ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಮಾರುಕಟ್ಟೆಯಲ್ಲಿ ಪಲ್ಲಟ ಹಾಗೂ ಕಳೆದ ವರ್ಷದ ಕರೆನ್ಸಿ ಮೌಲ್ಯ ಕುಸಿತದಿಂದ ಚೇತರಿಸಿಕೊಳ್ಳುವುದು ದೇಶದ ಆರ್ಥಿಕತೆಗೆ ಕಷ್ಟಕರವಾಗಿದೆ. ಚುನಾವಣೆ ವರ್ಷದಲ್ಲಿ ಜನರನ್ನು ಮೆಚ್ಚಿಸಲು ಕೇಂದ್ರ ಸರಕಾರ ಹೆಚ್ಚು ವೆಚ್ಚ ಮಾಡಬೇಕಿದೆ.

Advertisement

ಇದರಿಂದಾಗಿ ಆರ್ಥಿಕ ಪ್ರಗತಿ ಕುಂಠಿತಗೊಳ್ಳಲಿದೆ. ಕಳೆದ ಸೆಪ್ಟೆಂಬರ್‌ಗೆ ಕೊನೆಗೊಂಡ ತ್ತೈಮಾಸಿಕವು ಶೇ. 7.1 ರ ಗತಿಯಲ್ಲಿ ಪ್ರಗತಿ ಕಂಡಿದೆ. ಇನ್ನೊಂದೆಡೆ ಕಳೆದ ತಿಂಗಳು ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಂಟಾಗಿರುವುದರಿಂದ ಬಿಜೆಪಿ ಮೇಲೆ ಒತ್ತಡ ಹೆಚ್ಚಿದೆ. ಹೀಗಾಗಿ ವೆಚ್ಚಕ್ಕೆ ಸಂಬಂಧಿಸಿದ ಒತ್ತಡ ತೀವ್ರಗೊಂಡಿದೆ ಎಂದು ಹೇಳಲಾಗಿದೆ. ಅಲ್ಲದೆ, ಈಗಾಗಲೇ ಸರಕಾರ ತನ್ನ ವಿತ್ತೀಯ ಕೊರತೆ ಗುರಿಯನ್ನು ಮೀರಿದ್ದು, ಮುಂದಿನ ಎರಡು ತಿಂಗಳಲ್ಲಿ ವಿತ್ತೀಯ ಕೊರತೆ ಇನ್ನಷ್ಟು ಹೆಚ್ಚಲಿದೆ.

ಸದ್ಯದಲ್ಲೇ ರೈತರಿಗೆ ನಗದು ಅಥವಾ ಸಾಲ ಮನ್ನಾ ರೀತಿಯ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇರುವುದರಿಂದ ಸರಕಾರದ ಬೊಕ್ಕಸದ ಮೇಲೆ ಇನ್ನಷ್ಟು ಹೊರೆ ಬೀಳಲಿದೆ ಎಂದು ಹೇಳಲಾಗಿದೆ. ನೋಮುರಾ ಹೋಲ್ಡಿಂಗ್ಸ್‌ ಪ್ರಕಾರ ವಿಶ್ವದ ಆರ್ಥಿಕತೆಯು ಶೇ. 2.8 ದರದಲ್ಲಿ ಅಭಿವೃದ್ಧಿ ಕಾಣಲಿದೆ. ಇದಕ್ಕೆ ಚೀನಾ ಹಾಗೂ ಇತರ ದೇಶಗಳ ಆರ್ಥಿಕ ಪ್ರಗತಿ ಕುಸಿತವೇ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next