Advertisement

ಚುನಾವಣೆ: ಪಕ್ಷಗಳ ಮ್ಯಾರಥಾನ್‌ ಸಭೆ

03:16 PM Aug 17, 2021 | Team Udayavani |

ದೊಡ್ಡಬಳ್ಳಾಪುರ: ನಗರಸಭೆ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದ್ದು ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.

Advertisement

ನಗರಸಭೆಯ 31 ವಾರ್ಡ್‌ಗಳಿಗೆ ಸೆ.3 ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ಅಧಿಸೂಚನೆ ಹೊರಡಿಸಿದ್ದಾರೆ.

ನೇಮಕ:ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತಾಪಂ ಕಾರ್ಯ ನಿರ್ವಹಣಾಧಿಕಾರಿಗಳ ಕಚೇರಿಯ ಆವರಣದಲ್ಲಿ-3 ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಒಂದು ಸೇರಿ ಒಟ್ಟು 4 ಚುನಾವಣಾ ಕೇಂದ್ರ ಸ್ಥಾನಗಳ ವ್ಯವಸ್ಥೆ ಮಾಡಲಾಗಿದೆ. ನಗರಸಭೆಯ
ವಾರ್ಡ್‌ ಸಂಖ್ಯೆ 1ರಿಂದ 8ರವರೆಗೆ ತಾಪಂ ಕಾರ್ಯಾಲಯ ಚುನಾವಣಾ ಕೇಂದ್ರ ಸ್ಥಾನವಾಗಿದ್ದು , ಚುನಾವಣಾಧಿಕಾರಿಯಾಗಿಟಿ.ಮುರಡಯ್ಯ, ಸಹಾಯಕ ಚುನಾವಣಾಧಿಕಾರಿಯಾಗಿ ಎಚ್‌.ಬಿ.ಹನುಮಂತಪ್ಪ ಹಿಂದಿ ನಮನೆ ಕಾರ್ಯ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ:ಅಫ್ಘಾನ್ ವಲಸಿಗರು ಮತ್ತೆ ಅತಂತ್ರ: ಟರ್ಕಿಯಿಂದ 295 ಕಿಲೋ ಮೀಟರ್ ಬೃಹತ್ ಗೋಡೆ ನಿರ್ಮಾಣ!

ವಾರ್ಡ್‌ ಸಂಖ್ಯೆ 9ರಿಂದ 16ರವರೆಗೆ ಹಿರಿಯ ತೋಟಗಾರಿಕೆ ನಿರ್ದೇಶಕರ ಕಚೇರಿ ಚುನಾವಣಾ ಕೇಂದ್ರ ಸ್ಥಾನವಾಗಿದ್ದು, ಚುನಾವ
ಣಾಧಿಕಾರಿಯಾಗಿ ಶ್ರೀನಿವಾಸ್‌, ಸಹಾಯಕ ಚುನಾವಣಾಧಿಕಾರಿಯಾಗಿ ಉದಯ್‌ ಕಾರ್ಯ ನಿರ್ವಹಿಸಲಿದ್ದಾರೆ.

Advertisement

ವಾರ್ಡ್‌ ಸಂಖ್ಯೆ 17ರಿಂದ 24ರವರೆಗೆ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ, ಚುನಾವಣೆ ಕೇಂದ್ರ ಸ್ಥಾನವಾಗಿದ್ದು, ಚುನಾವಣಾಧಿಕಾರಿಯಾಗಿ ಎಂ.ವಿ.ಪ್ರಸಾದ್‌ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಎನ್‌.ಶ್ರೀನಿವಾಸ್‌ಕಾರ್ಯ ನಿರ್ವಹಿಸಲಿದ್ದಾರೆ.
ವಾರ್ಡ್‌ ಸಂಖ್ಯೆ 25ರಿಂದ 31ರವರೆಗೆ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ (ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ), ಚುನಾವಣಾ ಕೇಂದ್ರ ಸ್ಥಾನವಾಗಿದ್ದು, ಚುನಾವಣಾಧಿಕಾರಿಯಾಗಿ ಬಿ.ಕೆ.ಯೋಗೇಶ್‌ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಸೋಮಶೇಖರ್‌ ಕಾರ್ಯ ನಿರ್ವಹಿಸಲಿದ್ದಾರೆ.

ಸೋಮವಾರ ಚುನಾವಣಾ ಕೇಂದ್ರ ಸ್ಥಾನದಲ್ಲಿ ಚುನಾವಣಾಧಿಕಾರಿಗಳು ನಾಮಪತ್ರದ ಅರ್ಜಿ ನೀಡಲು ಕ್ರಮವಾಗಿ ಸಿದ್ಧಪಡಿಸಿ
ಕೊಳ್ಳುತ್ತಿದ್ದರು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ನಾಮಪತ್ರದ ಅರ್ಜಿ ಪಡೆದು, ತಮಗಿರುವ
ಅನುಮಾನ ಬಗೆಹರಿಸಿಕೊಳ್ಳುತ್ತಿದ್ದರು.

ಸೋಮವಾರ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಇನ್ನೂ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳದೇ ಮುಖಂಡರ ಸಭೆಗಳು ನಡೆಯುತ್ತಿವೆ. ಈ ಬಾರಿಯೂ ಪಕ್ಷೇತರರು ಹೆಚ್ಚಿನ ಮಟ್ಟದಲ್ಲಿ ಸ್ಪರ್ಧಿಸುವ ‌ ಲಕ್ಷಣ ಗೋಚರಿಸುತ್ತಿದ್ದು  ಬುಧವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಬಿರುಸುಗೊಳ್ಳಲಿದೆ.

ಬ್ಯಾನರ್‌, ಬಂಟಿಂಗ್ಸ್‌ ತೆರವುಗೊಳಿಸಿದ ಪೌರ ಸಿಬ್ಬಂದಿ
ನಗರಸಭೆ ಚುನಾವಣೆ ಘೋಷಣೆ ಹಿನ್ನೆಲೆ ನಗರಸಭೆ ವ್ಯಾಪ್ತಿಯಲ್ಲಿ ಅಳವಡಿಸಿರುವ ಫ್ಲೆಕ್ಸ್‌, ಬ್ಯಾನರ್, ಬಂಟಿಂಗ್ಸ್‌ ಮತ್ತು ಇನ್ನಿತರೆ ಭಿತ್ತಿಪತ್ರ ತೆರವುಗೊಳಿಸುವಂತೆ ಪೌರಾಯುಕ್ತ ರಮೇಶ್‌ ಎಸ್‌. ಸುಣಗಾರ್‌ ಆದೇಶಿಸಿದ್ದಾರೆ. ನಗರದ ವಿವಿಧೆಡೆ ಹಾಕಲಾಗಿದ್ದ ಫ್ಲೆಕ್ಸ್‌, ಬ್ಯಾನರ್,ಬಂಟಿಂಗ್ಸ್‌ ಇನ್ನಿತರೆ ಭಿತ್ತಿಪತ್ರಗಳನ್ನು ನಗರಸಭೆ ಪರಿಸರ ಅಭಿಯಂತರರು,ಆರೋಗ್ಯ ನಿರೀಕ್ಷಕರ ನೇತೃತ್ವದಲ್ಲಿ ಪೌರ ಕಾರ್ಮಿಕರು ತೆರವುಗೊಳಿಸಿದರು.

– ಶ್ರೀಕಾಂತ್‌ ಡಿ

Advertisement

Udayavani is now on Telegram. Click here to join our channel and stay updated with the latest news.

Next