Advertisement
ಮುಂದಿನ 24 ತಿಂಗಳಿಗೆ ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷರಾಗಿ ಡಿ.ಕೆ.ಶಿ. ಬೆಂಬಲಿತ ಬಣದ ಬಿ. ಕೆಂಚಪ್ಪಗೌಡ ಕಾರ್ಯ ನಿರ್ವಹಿಸಲಿದ್ದಾರೆ. ಎಚ್.ಡಿ.ಕೆ. ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಡಾ| ಅಂಜಿನಪ್ಪ ಅವರು ಕೆಂಚಪ್ಪ ಗೌಡ ಅವರ ವಿರುದ್ಧ ಸೋಲನುಭವಿಸಿದರು.
ವಿಶೇಷ ಅಂದರೆ 3 ವರ್ಷಗಳ ಆಡಳಿತ ಅವಧಿಯಲ್ಲಿ ಸಂಘ 5 ಅಧ್ಯಕ್ಷರನ್ನು ಕಂಡಿದೆ. ಆರಂಭದಲ್ಲಿ ಬಿ. ಕೆಂಚಪ್ಪ ಗೌಡ ಅಧ್ಯಕ್ಷರಾಗಿದ್ದರು. ಅನಂತರ ಅವರನ್ನು ಕೆಳಗಿಸಿ ಜೆಡಿಎಸ್ ಶಾಸಕ ಸಿ.ಎನ್. ಬಾಲಕೃಷ್ಣ ಅಧ್ಯಕ್ಷರಾದರು. ಇದಾದ ಅನಂತರ ನಡೆದ ಬೆಳವಣಿಗೆಯಲ್ಲಿ ಬಾಲಕೃಷ್ಣ ಅವರನ್ನು ಕೆಳಗಿಳಿಸಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಡಿ. ಹನುಮಂತಯ್ಯ ಅವರು ಸಂಘದ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಆಗಿದ್ದರು. ಕೊನೆಯಲ್ಲಿ ನಡೆದ ಬಣರಾಜಕೀಯದಲ್ಲಿ ಜೆಡಿಎಸ್‌ನ ಸಿ.ಎನ್. ಬಾಲಕೃಷ್ಣ ಮತ್ತೆ ಅಧ್ಯಕ್ಷರಾಗಿ ಅಧಿಕಾರ ಚುಕ್ಕಾಣಿ ಹಿಡಿದ್ದರು.