Advertisement

ಮತ ಎಣಿಕೆ ಸ್ವಾರಸ್ಯ: ಮತವನ್ನು ಸ್ಕೇಲ್ ನಿಂದ ಅಳೆದ ಚುನಾವಣಾಧಿಕಾರಿ!

01:32 PM Dec 30, 2020 | Team Udayavani |

ಕೊಪ್ಪಳ: ಗವಿಸಿದ್ದೇಶ್ವರ ಪ್ರೌಢ ಶಾಲಾ ಆವರಣದಲ್ಲಿ ನಡೆದ ಮತ ಎಣಿಕೆ ವೇಳೆ ಬ್ಯಾಲೇಟ್ ಪೇಪರ್ ನಲ್ಲಿ ಇಬ್ಬರು ಅಭ್ಯರ್ಥಿಗಳ ಮಧ್ಯೆ ಮತ ಚಲಾಯಿಸಿದ್ದನ್ನು ಚುನಾವಣಾ ಅಧಿಕಾರಿ ಮತವನ್ನು ಅಳತೆಕೋಲಿನಿಂದ ಅಳೆದು ಗಮನ ಸೆಳೆದರು.

Advertisement

ಗೊಂಡಬಾಳ ಗ್ರಾ.ಪಂನ ಮುದ್ದಾಬಳ್ಳಿ ಒಂದನೇ ವಾರ್ಡಿನ ಮತ ಎಣಿಕೆಯ ವೇಳೆ ಟಿವಿ ಚಿಹ್ನೆಯ ಗಾಳೆಪ್ಪ ಪೂಜಾರ ಹಾಗೂ ಆಟೋ ಚಿಹ್ನೆಯ ಮಧ್ಯೆ ಮತದಾರನೋರ್ವ ಮತ ಚಲಾಯಿಸಿದ್ದು ಕಂಡು ಬಂತು. ಈ ಮತವನ್ನು ಎಣಿಕೆಯಿಂದ ಹೊರಗಿಟ್ಟು ಮತ ಎಣಿಕೆ ಮಾಡಲಾಗಿತ್ತು.

ಇದನ್ನೂ ಓದಿ:LIVE: ಗ್ರಾ.ಪಂ ಫಲಿತಾಂಶ: ಸಹೋದರರ ಸವಾಲ್ ನಲ್ಲಿ ಹತ್ತು ಮತ ಅಂತರದ ಗೆಲುವು ಪಡೆದ ಹಿರಿಯಣ್ಣ

ಕೊನೆಯ ಹಂತದಲ್ಲಿ ಇಬ್ಬರು ಅಭ್ಯರ್ಥಿಗಳ ಮಧ್ಯೆ ಚಲಾಯಿಸಲಾಗಿದ್ದ ಮತ ಎಣಿಕೆ ವೇಳೆ ಚುನಾವಣಾಧಿಕಾರಿ ಆ ಮತ ಸ್ಕೇಲ್ ನಿಂದ ಅಳತೆ ಮಾಡಿ ಟಿವಿ ಚಿಹ್ನೆಯ ಮತಕ್ಕೆ ಹೆಚ್ಚು ಪ್ರಾಶಸ್ತ್ಯ ಬಂದ ಹಿನ್ನೆಲೆಯಲ್ಲಿ ಗಾಳೆಪ್ಪ ಪೂಜಾರ ಮತ ಎಂದು ಘೋಷಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next