Advertisement

ಪಾಲಿಕೆ ಚುನಾವಣೆಗೆ ಸಜ್ಜಾದ ಮಂಗಳೂರು: ಹೇಗಿದೆ ಗೊತ್ತಾ ತಯಾರಿ

01:47 PM Nov 11, 2019 | keerthan |

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಸರ್ವ ಸಿದ್ದತೆ ಮಾಡಲಾಗಿದೆ. ಮಂಗಳವಾರ ನಡೆಯಲಿರುವ ಚುನಾವಣೆಗೆ ಇಂದು ಮಸ್ಟರಿಂಗ್ ಕಾರ್ಯ ಕೂಡಾ ನಡೆಯಿತು.

Advertisement

ಮಂಗಳವಾರ ಒಟ್ಟು 448 ಬೂತ್ ಗಳಲ್ಲಿ ಚುನಾವಣೆ ನಡೆಯಲಿದ್ದು, ಅವುಗಳಲ್ಲಿ 75 ಬೂತ್ ಗಳನ್ನು ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಪ್ರತೀ ಸೂಕ್ಷ್ಮ ಮತಗಟ್ಟೆಗಳಿಗೆ ಓರ್ವ ಹೆಡ್ ಕ್ವಾನ್ಸ್ಟೇಬಲ್ ಮತ್ತು ಒಬ್ಬ ಹೋಮ್ ಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾಮಾನ್ಯ ಮತಗಟ್ಟೆಗಳಿಗೆ ಓರ್ವ ಕಾನ್ಸ್ಟೇಬಲ್ ಅಥವಾ ಹೋಮ್ ಗಾರ್ಡ್ ನ್ನು ನಿಯೋಜನೆ ಮಾಡಲಾಗಿದೆ.

ಚುನಾವಣಾ ಪ್ರಯುಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು, ಇಬ್ಬರು ಡಿಸಿಪಿ, ನಾಲ್ವರು ಎಸಿಪಿ, 12 ಪೊಲೀಸ್ ಇನ್ಸ್ಪೆಕ್ಟರ್ ಗಳು, 32 ಸಬ್ ಇನ್ಸ್ಪೆಕ್ಟರ್ ಗಳು, 77 ಎಎಸ್ ಐ, 511 ಓರ್ವ ಹೆಡ್ ಕ್ವಾನ್ಸ್ಟೇಬಲ್/ ಕ್ವಾನ್ಸ್ಟೇಬಲ್ ಮತ್ತು 193 ಹೋಮ್ ಗಾರ್ಡ್ ಸಿಬ್ಬಂದಿಯನ್ನು ನೇಮಿಸಲಾಗಿದೆ.

ಇದಲ್ಲದೆ ಐದು ಕೆಎಸ್ ಆರ್ ಪಿ ತುಕಡಿ, 10 ಕಾರುಗಳು, ಮತ್ತು 2 ರಾಪಿಡ್ ಆಕ್ಷನ್ ಫೋರ್ಸ್ ಪಡೆಗಳು ಭದ್ರತೆಯ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಎಂಟು ಕಡೆ ಚೆಕ್ ಪಾಯಿಂಟ್ ಮಾಡಿದ್ದು, ಗಸ್ತು ಕಾರ್ಯ ನಿರಂತರವಾಗಿ ನಡೆಯಲಿದೆ.

ನ್ಯಾಯಾಲಯಕ್ಕೆ ರಜೆ:

Advertisement

ಮಂಗಳೂರು ಮಹಾ ನಗರ ಪಾಲಿಕೆಯ ಚುನಾವಣೆಯ ಕಾರಣಕ್ಕೆ ಮಂಗಳವಾರ ಮಂಗಳೂರು ನ್ಯಾಯಾಲಯಕ್ಕೆ ರಜೆ ಘೋಷಣೆ ಮಾಡಲಾಗಿದೆ. ನಾಳೆ ನಡೆಯಲಿರುವ ಕೋರ್ಟ್ ಕಲಾಪವನ್ನು ಮುಂದಿನ ದಿನಕ್ಕೆ ಮುಂದೂಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next