Advertisement

‘ಎಲೆಕ್ಷನ್ ಸೌಂದರ್ಯ ಸ್ಪರ್ಧೆಯಲ್ಲ’: ಪ್ರಿಯಾಂಕಗೆ ಮೋದಿ ಟಾಂಗ್

04:29 AM Jan 28, 2019 | Team Udayavani |

ಕೊಲ್ಕೊತ್ತಾ: ಪ್ರಿಯಾಂಕಾ ಗಾಂಧಿಯವರನ್ನು ಕಾಂಗ್ರೆಸ್ ಪಕ್ಷವು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ ಬೆನ್ನಲ್ಲೇ ಬಿ.ಜೆ.ಪಿ. ಮತ್ತು ಅದರ ಮಿತ್ರ ಪಕ್ಷಗಳಲ್ಲಿ ಅಳುಕು ಹುಟ್ಟಿದಂತಿದೆ. ಪ್ರಿಯಾಂಕ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ ಬಳಿಕ ಅವರ ವಿರುದ್ಧ ವೈಯಕ್ತಿಕ ಟೀಕೆಗಳ ಪ್ರಕರಣಗಳು ವರದಿಯಾಗುತ್ತಲೇ ಇದೆ.

Advertisement

ಇದಕ್ಕೆ ಹೊಸ ಸೇರ್ಪಡೆಯೆಂಬಂತೆ ಬಿಹಾರದ ಉಪ ಮುಖ್ಯಮಂತ್ರಿ ಮತ್ತು ಬಿ.ಜೆ.ಪಿ.ಯ ಹಿರಿಯ ನಾಯಕ ಸುಶೀಲ್ ಮೋದಿ ಅವರು ಪ್ರಿಯಾಂಕ ಗಾಂಧಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ‘ಚುನಾವಣೆ ಎಂಬುದು ಸೌಂದರ್ಯ ಸ್ಪರ್ಧೆಯಲ್ಲ, ಮತದಾರರು ಅಭ್ಯರ್ಥಿಯ ಸಾಧನೆಯನ್ನು ನೋಡಿ ಮತ ಹಾಕುತ್ತಾರೆಯೇ ಹೊರತು ಅಭ್ಯರ್ಥಿಯ ಬಾಹ್ಯ ಸೌಂದರ್ಯಕ್ಕೆ ಮರುಳಾಗಿ ಯಾರೂ ಮತ ಹಾಕುವುದಿಲ್ಲ…’ ಎಂದು ಅವರು ಹೇಳಿಕೆ ನೀಡಿದ್ದಾರೆ.

‘ಚುನಾವಣೆಯೆಂಬುದು ಕುಸ್ತಿ ಪಂದ್ಯಾಟವೂ ಅಲ್ಲ, ಸೌಂದರ್ಯ ಸ್ಪರ್ಧೆಯೂ ಅಲ್ಲ, ಅಥವಾ ಇನ್ಯಾವುದೇ ರೀತಿಯ ಸ್ಪರ್ಧಾ ಕಣವೂ ಇದಲ್ಲ’ ಎಂದು ಸುಶೀಲ್ ಮೋದಿ ಅವರು ಕೊಲ್ಕೊತ್ತಾದ ಹೌರಾದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ನುಡಿದರು.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಪ್ರಣಬ್ ಮುಖರ್ಜಿಯವರಿಗೆ ಪ್ರಧಾನ ಮಂತ್ರಿ ಪಟ್ಟ ತಪ್ಪಿಸುವ ಮೂಲಕ ಗಾಂಧಿ ಕುಟುಂಬವು ತನ್ನದೇ ಪಕ್ಷದ ಹಿರಿಯ ನಾಯಕರಿಗೆ ಅನ್ಯಾಯವೆಸಗಿದೆ ಎಂಬ ಗಂಭೀರ ಆರೋಪವನ್ನೂ ಸುಶೀಲ್ ಮೋದಿ ಇದೇ ಸಂದರ್ಭದಲ್ಲಿ ಮಾಡಿದರು. ಇಂತಹ ಹಿರಿಯ ನಾಯಕರಿಗೆ ಭಾರತ ರತ್ನ ನೀಡುವ ಮೂಲಕ ಪ್ರಣಬ್ ಅವರ ಸಾಧನೆಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಗುರುತಿಸಿದೆ ಅದಕ್ಕಾಗಿ ನಾನು ಕೇಂದ್ರ ಸರಕಾರವನ್ನು ಅಭಿನಂದಿಸುತ್ತೇನೆ ಎಂದು ಅವರು ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next