Advertisement

ಮತ ಎಣಿಕೆಯಲ್ಲಿ ಯಾವುದೇ ಗೊಂದಲವಿಲ್ಲ: ಡಿಸಿ

08:00 PM Dec 16, 2021 | Team Udayavani |

ಚಿಕ್ಕಮಗಳೂರು: ವಿಧಾನ ಪರಿಷತ್‌ ಮತಎಣಿಕೆಚುನಾವಣಾ ಏಜೆಂಟರು, ಅಭ್ಯರ್ಥಿಗಳ ಸಮಕ್ಷಮದಲ್ಲಿನಡೆಸಲಾಗಿದೆ. ಇದರಲ್ಲಿ ಇದರಲ್ಲಿ ಯಾವುದೇಗೊಂದಲವಿಲ್ಲ ಎಂದು ಜಿಲ್ಲಾ ಧಿಕಾರಿ ಕೆ.ಎನ್‌.ರಮೇಶ್‌ ತಿಳಿಸಿದರು.

Advertisement

ಬುಧವಾರ ನಗರದ ಜಿಲ್ಲಾ ಧಿಕಾರಿಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಸ್ಟ್ರಾಂಗ್‌ ರೂಮ್‌ ತೆರೆಯುವುದರಿಂದ ಹಿಡಿದುಕಡೆಯ ಮತಎಣಿಕೆ ಮುಗಿದು ಸೀಲ್‌ ಮಾಡುವತನಕ ಚುನಾವಣಾ ಏಜೆಂಟರ್‌ ಸಮಕ್ಷಮದಲ್ಲಿಎಲ್ಲ ಪ್ರಕ್ರಿಯೆ ಜೊತೆಗೆ ವಿಡಿಯೋ ಮಾಡಲಾಗಿದೆಎಂದರು. ಪ್ರತೀ ಸುತ್ತಿನಲ್ಲೂ ಏಜೆಂಟರ್‌ ಸಹಿಯನ್ನುಪಡೆಯಲಾಗಿದೆ.

ಮತದಲ್ಲಿ ಸಂಶಯಾಸ್ಪದ ಅಥವಾಅಸಿಂಧು ಮಾಡಬೇಕಾದ ಸಂದರ್ಭದಲ್ಲಿ ಏಜೆಂಟರು,ಅಭ್ಯರ್ಥಿಗಳು ಮತ್ತು ಚುನಾವಣಾ ಧಿಕಾರಿಗಳಸಮ್ಮುಖದಲ್ಲೇ ಮಾಡಲಾಗಿದೆ. ಯಾವುದೇ ಗೊಂದಲಆಗಿಲ್ಲ, ಯಾರು ಆಕ್ಷೇಪಣೆ ಮಾಡಿಲ್ಲ, ಕೊನೆ ಗಳಿಗೆಯಲ್ಲಿಮನವಿ ಸಲ್ಲಿಸಿದ್ದು, ಕಾನೂನು ರೀತಿ ಮನವಿಪರಿಗಣಿಸಿ ಚುನಾವಣಾ ಆಯೋಗಕ್ಕೆ ಕಳಿಸಿಚುನಾವಣಾ ಆಯೋಗದ ಅನುಮತಿ ಪಡೆದುಫಲಿತಾಂಶ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.

ದತ್ತಜಯಂತಿ ಹಿನ್ನೆಲೆಯಲ್ಲಿಭಕ್ತರಿಗೆ ಮೂಲ ಸೌಲಭ್ಯ ನೀಡಲಾಗಿದೆ.ರಸ್ತೆ ಕಿರಿದಾಗಿರುವುದರಿಂದ ದೊಡ್ಡ ವಾಹನಗಳಸಂಚಾರ ನಿರ್ಬಂಧಿ ಸಲಾಗಿದೆ. ಕೋವಿಡ್‌ ನಿಯಮಪಾಲಿಸುವಂತೆ ತಿಳಿಸಲಾಗಿದ್ದು, ಪ್ರವಾಸಿಗರನ್ನುನಿರ್ಬಂಧಿ ಸಲಾಗಿದೆ. ಮುಂಗಡವಾಗಿ ಹೋಮ್‌ಸ್ಟೇಅಥವಾ ರೆಸಾರ್ಟ್‌ ಮುಂಗಡವಾಗಿ ಬುಕ್ಕಿಂಗ್‌ ಮಾಡಿಕೊಂಡಿದ್ದರೇ ಬುಕ್ಕಿಂಗ್‌ ರಶೀದಿ ತೋರಿಸಿ ತೆರಳಬಹುದುಎಂದರು.

Advertisement

Udayavani is now on Telegram. Click here to join our channel and stay updated with the latest news.

Next