Advertisement

ಚುನಾವಣೆ: ಮೇ 10ಕ್ಕೆ ವೇತನ ಸಹಿತ ರಜೆಗೆ ಸೂಚನೆ

09:08 PM Apr 01, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ನಡೆಯುವ ಮೇ 10 (ಬುಧವಾರ)ರಂದು ವೇತನ ಸಹಿತ ರಜಾ ದಿನವೆಂದು ಘೋಷಿಸಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಮುಖ್ಯ ಕಾರ್ಯದರ್ಶಿ, ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಮೂಲಕ ಸೂಚಿಸಿದೆ.

Advertisement

1951ರ ಜನಪ್ರತಿನಿಧಿ ಕಾಯ್ದೆಯ 135ಬಿ ಸೆಕ್ಷನ್‌ ಪ್ರಕಾರ ಚುನಾವಣಾ ದಿನಾಂಕದಂದು ಸಿಬ್ಬಂದಿಗೆ ರಜೆ ನೀಡಬೇಕೆಂದು ಉಲ್ಲೇಖವಿದೆ. ಈ ಹಿನ್ನೆಲೆಯಲ್ಲಿ ಯಾವುದೇ ವ್ಯವಹಾರ, ವ್ಯಾಪಾರ, ಉದ್ದಿಮೆಯ ಸಿಬ್ಬಂದಿ, ದಿನಗೂಲಿ ನೌಕರಿಗೆ ಮತ ಹಾಕಲು ವೇತನ ಸಹಿತ ರಜೆ ನೀಡುವಂತೆ ಆಯೋಗ ಹೇಳಿದೆ. ಸಿಬ್ಬಂದಿಯ ಉದ್ಯೋಗದ ಜಾಗ ಮತ್ತು ಮತಕ್ಷೇತ್ರದ ಜಾಗ ಬೇರೆ ಬೇರೆ ಆಗಿದ್ದರೆ ಮತದಾನದಲ್ಲಿ ಪಾಲ್ಗೊಳ್ಳಲು ಸಹಾಯವಾಗುವಂತೆ ಸಂಬಳ ಸಹಿತ ರಜೆ ನೀಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next