ಲಕ್ನೋ/ಕೋಲ್ಕತಾ: 2024ರ ಲೋಕಸಭೆಯ ಚುನಾ ವಣೆ ಯಲ್ಲಿ ನಿರ್ಣಾಯಕ ಎನಿಸುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಿದ್ಧತೆ ಶುರುವಾಗಿದೆ. ಬಿಜೆಪಿ, ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್ ಹಲವು ರೀತಿ ಯಲ್ಲಿ ತಯಾರಿಗಳನ್ನು ಆರಂಭಿಸಿವೆ. 2017ರ ಚುನಾ ವಣೆ ವೇಳೆ, ಸಮಾಜವಾದಿ ಪಕ್ಷದಿಂದ ಹೊರಹೋಗಿದ್ದ ಮಾಜಿ ಸಚಿವ ಶಿವಪಾಲ್ ಯಾದವ್ ಮತ್ತೆ ಮಾತೃಪಕ್ಷ ಸೇರುವ ಸಿದ್ಧತೆಯಲ್ಲಿದ್ದಾರೆ. ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸಹೋದರರಾಗಿ ರುವ ಅವರು, ಎಸ್‌ಪಿ ಅಧ್ಯಕ್ಷ ಅಖೀಲೇಶ್ ಯಾದವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಇಂದು ಪ್ರಧಾನಿ ಉ.ಪ್ರಕ್ಕೆ: ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಅಲಿಗಡದ ಲೋಧಾ ಪಟ್ಟಣಕ್ಕೆ ಮಂಗಳವಾರ ಭೇಟಿ ನೀಡಲಿ ದ್ದಾರೆ. ಅಲ್ಲಿ ಅವರು ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಎಂಬ ಹೊಸ ವಿವಿಯ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಸೋಮವಾರ ಭೇಟಿ ನೀಡಿ ಕೊನೆಯ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.
ಪ್ರಿಯಾಂಕಾ ವಾದ್ರಾ ನೇತೃತ್ವದಲ್ಲಿಯೇ ಚುನಾವಣೆ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ನೇತೃತ್ವದಲ್ಲಿಯೇ ಉ.ಪ್ರ. ವಿಧಾನಸಭೆ ಚುನಾವಣೆ ಎದುರಿಸಲಾಗುತ್ತದೆ. ಯಾವುದೇ ಮೈತ್ರಿಕೂಟ ದಲ್ಲಿ ಭಾಗವಹಿಸುವುದಿಲ್ಲ ಎಂದು ಪಕ್ಷದ ಮುಖಂಡ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ. “ಎಎನ್‌ಐ’ ಸುದ್ದಿಸಂಸ್ಥೆ ಜತೆಗೆ ಮಾತನಾಡಿದ ಅವರು, “ಮೈತ್ರಿ ಕೂಟ ಎನ್ನುವುದು ಹೃದಯದ ಮೂಲಕ ರಚನೆ ಯಾಗುತ್ತದೆ. ನಮ್ಮ ಪಕ್ಷಕ್ಕೆ ಯಾರಾದರೂ ಸೇರ್ಪಡೆ ಯಾಗುವುದಿದ್ದರೆ ಸ್ವಾಗತಿಸುತ್ತೇವೆ’ ಎಂದರು.
ನಾಮಪತ್ರ ಸಲ್ಲಿಸಿದ ಪ್ರಿಯಾಂಕ :
ಪಶ್ಚಿಮ ಬಂಗಾಲದ ಭವಾನಿಪುರದಲ್ಲಿ ಸೆ.30ರಂದು ನಡೆಯಲಿರುವ ಉಪ-ಚುನಾವಣೆ ನಿಧಾನಕ್ಕೆ ರಂಗೇರಲಾರಂಭಿಸಿದೆ. ಟಿಎಂಸಿ ನಾಯಕಿ, ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಎಂದು ಸ್ಪರ್ಧಿಸಿರುವ ಬಿಜೆಪಿ ನಾಯಕಿ ಪ್ರಿಯಾಂಕಾ ಟಿಬರೆವಾಲಾ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಲ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸುವೇಂದು ಅಧಿಕಾರಿ, ದಿನೇಶ್ ತ್ರಿವೇದಿ ಸೇರಿದಂತೆ ಪ್ರಮುಖರು ಈ ಸಂದರ್ಭದಲ್ಲಿ ಇದ್ದರು. ಟಿಎಂಸಿ ಮುಖಂಡ ಫಿರ್ಹಾದ್ ಹಕೀಂ “ಬಿಜೆಪಿ ಅಭ್ಯರ್ಥಿ ಯುವತಿ’ ಎಂದು ಹೇಳಿದ್ದಕ್ಕೆ ತಿರುಗೇಟು ನೀಡಿದ ಪ್ರಿಯಾಂಕಾ “ಯುವತಿ ಯಾವತ್ತೂ ಯುವತಿಯಾಗಿ ಉಳಿಯುವುದಿಲ್ಲ. ಆಕೆ ಬೆಳೆದು ದೊಡ್ಡವಳಾಗಿ ಸವಾಲುಗಳನ್ನು ಎದುರಿಸಲು ಕಲಿಯುತ್ತಾಳೆ’ ಎಂದು ಹೇಳಿದ್ದಾರೆ. ಸಿಎಂ ಮಮತಾ ಬ್ಯಾನರ್ಜಿ ನ.5ರ ಒಳಗೆ ಗೆದ್ದು ಸ್ಥಾನ ಉಳಿಸಿಕೊಳ್ಳಬೇಕಾಗಿದೆ. ಅ.5ರಂದು ಫಲಿತಾಂಶ ಪ್ರಕಟವಾಗಲಿದೆ.