Advertisement

Election ಅಕ್ರಮ : 8 ಕೋ.ರೂ. ಮೌಲ್ಯದ ಮದ್ಯ, 5.50 ಕೋ.ರೂ. ನಗದು ವಶ

11:44 PM Mar 22, 2024 | Team Udayavani |

ಬೆಂಗಳೂರು/ಹುಬ್ಬಳ್ಳಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹದ್ದಿನ ಕಣ್ಣಿಟ್ಟಿರುವ ನೀತಿಸಂಹಿತೆ ಜಾರಿ ತಂಡಗಳು ರಾಜ್ಯದ ಹಲವೆಡೆ ಶುಕ್ರವಾರ ಭಾರೀ ಪ್ರಮಾಣದ ನಗದು, ಚಿನ್ನಾಭರಣ, ಮದ್ಯ, ಉಚಿತ ಉಡುಗೊರೆಗಳನ್ನು ವಶಪಡಿಸಿಕೊಂಡಿವೆ.

Advertisement

ರಾಮನಗರ ಜಿಲ್ಲೆಯ ಹೆಜ್ಜಾಲ ಸಮೀಪದ ಚೆಕ್‌ಪೋಸ್ಟ್‌ನಲ್ಲಿ ದಾಖಲೆಗಳಿಲ್ಲದ 5.50 ಕೋ. ರೂ. ನಗದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯೊಂದರಲ್ಲೇ ಸುಮಾರು 7.86 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಧಾರವಾಡದ ತೇಗೂರ ಚೆಕ್‌ಪೋಸ್ಟ್‌ ನಲ್ಲಿ ಗುರುವಾರ ರಾತ್ರಿ ದಾಖಲೆ ಇಲ್ಲದ 38.50 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣಗಳು ಪತ್ತೆಯಾಗಿವೆ.

ನೀತಿ ಸಂಹಿತೆ ಜಾರಿಯಾಗಿ ಒಂದೇ ವಾರದಲ್ಲಿ 36.41 ಕೋಟಿ ರೂ ಮೌಲ್ಯದ ಅಕ್ರಮ ಜಪ್ತಿ ಮಾಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next