Advertisement

Election ಅಕ್ರಮ: ಜಪ್ತಿ ಪ್ರಮಾಣ 239 ಕೋ.ರೂ.

09:07 PM Apr 20, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಘೋಷಣೆ ಆದ ಬಳಿಕದ ಚುನಾವಣ ಅಕ್ರಮಗಳ ಜಪ್ತಿ ಪ್ರಮಾಣ 239.52 ಕೋಟಿ ರೂ. ದಾಟಿದೆ. ಕಳೆದ 24 ಗಂಟೆಗಳಲ್ಲಿ ಅಂದಾಜು 35 ಕೋಟಿ ರೂ. ಜಪ್ತಿ ಆಗಿದೆ.

Advertisement

ಚುನಾವಣ ವೇಳಾಪಟ್ಟಿ ಪ್ರಕಟವಾದ ಮಾ.29ರಿಂದ ಎಪ್ರಿಲ್‌ 19ರ ವರೆಗೆ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತ‌ಂಡಗಳು, ಪೊಲೀಸರು ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿ 79.51 ಕೋಟಿ ರೂ. ನಗದು, 18.71 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆಗಳು, 73.46 ಕೋಟಿ ರೂ. ಮೌಲ್ಯದ 144.27 ಕೆ.ಜಿ. ಬಂಗಾರ, 4.06 ಕೋಟಿ ಮೌಲ್ಯದ 581.90 ಕೆ.ಜಿ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ 1,714 ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ.

ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸರು ಮತ್ತು ಅಬಕಾರಿ ಅಧಿಕಾರಿಗಳು ಸೇರಿ 47.93 ಕೋಟಿ ರೂ. ಮೌಲ್ಯದ 12.52 ಲಕ್ಷ ಲೀಟರ್‌ ಮದ್ಯ ವಶಪಡಿಸಿಕೊಂಡಿದ್ದು, 15.82 ಕೋಟಿ ರೂ. ಮೌಲ್ಯದ 1,047.96 ಕೆ.ಜಿ. ಮಾದಕ ದ್ರವ್ಯಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಅಬಕಾರಿ ಇಲಾಖೆಯು 2,175 ಗಂಭೀರ, ಪರವಾನಿಗೆ ಉಲ್ಲಂ ಸಿದ 1,731 ಎನ್‌ಡಿಪಿಎಸ್‌ 75 ಮತ್ತು ಅಬಕಾರಿ ಕಾಯ್ದೆ ಅನ್ವಯ ಒಟ್ಟು 12,657 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, 1,474 ವಿವಿಧ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ರಾಜ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next