Advertisement
ಈ ಪೈಕಿ ರಾಮನಗರ ಜಿಲ್ಲೆಯ ಹೆಜ್ಜಾಲ ಸಮೀಪದ ಚೆಕ್‌ಪೋಸ್ಟ್‌ನಲ್ಲಿ ದಾಖಲೆಗಳಿಲ್ಲದ 5.50 ಕೋ. ರೂ.ಅನ್ನು ವಶಪಡಿಸಿಕೊಂಡಿರುವುದು ವಿಶೇಷ. ಇದಲ್ಲದೆ, ಬೆಂಗಳೂರು ಗ್ರಾ.ಜಿಲ್ಲೆ ಯೊಂದರಲ್ಲೇ ಒಟ್ಟು 7 ಕೋಟಿ 86 ಲಕ್ಷ ರೂ. ಮೌಲ್ಯದ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜಿಲ್ಲೆ ಯಲ್ಲಿ ಸುಮಾರು 21 ಚೆಕ್‌ಪೋಸ್ಟ್ ಗಳನ್ನು ಚುನಾವಣಾಧಿಕಾರಿಗಳು ತೆರೆದಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳ ತಂಡ ನೆಲಮಂಗಲ, ದೇವನಹಳ್ಳಿಯ ವಿವಿಧೆಡೆ ದಾಳಿ ನಡೆಸಿ, ಕೋಟ್ಯಂತರ ಮೌಲ್ಯದ ಲಿಕ್ಕರ್ ವಶಕ್ಕೆ ಪಡೆದಿದ್ದಾರೆ. ರಾಯಚೂರು, ಚಾಮರಾಜನಗರ, ಬೆಳಗಾವಿ ಜಿಲ್ಲೆಗಳಲ್ಲಿ ಒಂದೇ ದಿನ ಒಟ್ಟು 25 ಲಕ್ಷ ರೂಪಾಯಿಗೂ ಅಧಿಕ ಮೊತ್ತವನ್ನು ಪಡಿಸಿಕೊಳ್ಳಲಾಗಿದೆ.
Related Articles
ಬೆಂಗಳೂರು: ಚುನಾವಣ ನೀತಿ ಸಂಹಿತೆ ಜಾರಿ ತಂಡಗಳು ಕಳೆದ 24 ಗಂಟೆಗಳಲ್ಲಿ ನಗದು, ಮದ್ಯ, ಮಾದಕ ವಸ್ತುಗಳು, ಉಚಿತ ಉಡುಗೊರೆ ಸಹಿತ 5.22 ಕೋಟಿಗೂ ಅಧಿಕ ಮೌಲ್ಯದ ಚುನಾವಣ ಅಕ್ರಮ ಸೊತ್ತನ್ನು ಜಪ್ತಿ ಮಾಡಿದೆ. ತನ್ಮೂಲಕ ನೀತಿ ಸಂಹಿತೆ ಜಾರಿಯಾಗಿ ಒಂದೇ ವಾರದಲ್ಲಿ 36.41 ಕೋಟಿ ರೂ ಮೌಲ್ಯದ ಅಕ್ರಮ ಜಫ್ತಿ ಮಾಡಲಾಗಿದೆ.
Advertisement
ಕಳೆದ 24 ಗಂಟೆಗಳ ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸರು 1.36 ಕೋ. ರೂ., ಆದಾಯ ತೆರಿಗೆ ತಂಡಗಳು 1.39 ಕೋ. ರೂ. ಸಹಿತ ಒಟ್ಟು 2.75 ಕೋಟಿ ರೂ ಅಕ್ರಮ ಜಫ್ತಿ ಮಾಡಿವೆ. 10.39 ಲಕ್ಷದ ಉಚಿತ ಉಡುಗೊರೆಗಳು, 46.04 ಲಕ್ಷ ಮೌಲ್ಯದ ಇತರ, 57.94 ಲಕ್ಷ ಮೌಲ್ಯದ ಮದ್ಯ, ಪೊಲೀಸರು 51.70 ಲಕ್ಷ ಮೌಲ್ಯದ ಚಿನ್ನ, ಆದಾಯ ತೆರಿಗೆ ಇಲಾಖೆಯಿಂದ 71.16 ಲಕ್ಷ ಮೌಲ್ಯದ ಚಿನ್ನ, 9 ಲಕ್ಷ ಮೌಲ್ಯದ ವಜ್ರವನ್ನು ಜಪ್ತಿ ಮಾಡಿದೆ.ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ಈವರೆಗೆ 9.64 ಕೋ. ರೂ. ನಗದು, 15.67 ಲಕ್ಷ ಮೌಲ್ಯದ ಉಚಿತ ಉಡುಗೊರೆ, 1.63 ಕೋಟಿ ರೂ ಇತರ, 22.85 ಕೋಟಿ ರೂ. ಮೌಲ್ಯದ 7.20 ಲಕ್ಷ ಲೀಟರ್ ಮದ್ಯ, 53.37 ಲಕ್ಷ ರೂ. ಮೌಲ್ಯದ 52.12 ಕೆಜಿ ಮಾದಕ ವಸ್ತುಗಳು, 1.27 ಕೋಟಿ ಮೌಲ್ಯದ 2.08 ಕೆಜಿ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ.