Advertisement
ಭಾರತದ ಜತೆಗೆ ಪಾಕಿಸ್ಥಾನ, ರಷ್ಯಾ ಚುನಾವಣೆಯಲ್ಲಿ ಮಧ್ಯ ಪ್ರವೇಶ ಮಾಡಿದೆ ಎಂಬುದು ಕೆನಡಾದ ಹೊಸ ತಕರಾರು. ಖಲಿಸ್ಥಾನ ಉಗ್ರ ನಿಜ್ಜರ್‌ನನ್ನು ಭಾರತವೇ ಹತ್ಯೆ ಮಾಡಿದೆ ಎಂದು ಈ ಹಿಂದೆ ಆರೋಪಿಸಿತ್ತು. 2021ರ ಚುನಾವಣೆ ಯಲ್ಲಿ ಹಸ್ತಕ್ಷೇಪ ಮಾಡಲು ಭಾರತ ಯತ್ನಿಸಿತ್ತು. ಭಾರತದ ಏಜೆಂಟ್‌ಗಳು ಖಲಿಸ್ಥಾನಿ ವಿರೋಧಿ ಭಾರತ ಪರ ಅಭ್ಯರ್ಥಿಗಳಿಗೆ ಅಕ್ರಮವಾಗಿ ಹಣಕಾಸು ನೆರವು ನೀಡಿದ್ದರೆನ್ನುವುದು ಹೊಸ ವಾದ.
ಕೆನಡಾ ಚುನಾವಣೆಯಲ್ಲಿ ಭಾರತ ಹಸ್ತಕ್ಷೇಪ ಮಾಡಿದೆ ಎಂಬ ಆರೋಪವನ್ನು ಭಾರತ ಸರಕಾರ ತಳ್ಳಿಹಾಕಿದೆ. ಇದೊಂದು ಆಧಾರ ರಹಿತ ಆರೋಪವಾಗಿದ್ದು, ಬೇರೆ ದೇಶಗಳ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಲ್ಲಿ ಮೂಗು ತೂರಿಸುವ ನೀತಿಯನ್ನು ಭಾರತ ಹೊಂದಿಲ್ಲ. ವಾಸ್ತವದಲ್ಲಿ, ಕೆನಡಾವೇ ನಮ್ಮ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡು ತ್ತಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.