Advertisement

ಕೇಂದ್ರಾಡಳಿತ ಪ್ರದೇಶವಾದ ಬಳಿಕ ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯ ಸಮರ

10:03 AM Nov 28, 2020 | keerthan |

ಶ್ರೀನಗರ/ಜಮ್ಮು: ಕೇಂದ್ರಾಡಳಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದಿನಿಂದ ಎಂಟು ಹಂತಗಳ ಜಿಲ್ಲಾ ಅಭಿವೃದ್ಧಿ ಸಂಸ್ಥೆಗಳ (ಡಿಡಿಸಿ) ಚುನಾವಣೆ ನಡೆಯಲಿದೆ.

Advertisement

2019 ಆ.5ರಂದು ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಮತ್ತು ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡಿದ ಬಳಿಕ ನಡೆಯಲಿರುವ ಮೊದಲ ಚುನಾವಣೆ ಇದಾಗಿದೆ.

12,153 ಪಂಚಾಯತ್‌ ಸೀಟುಗಳಿಗೆ ಉಪ ಚುನಾವಣೆಯೂ ನಡೆಯಲಿದೆ. ಈ ಪೈಕಿ ಜಮ್ಮು ವಿಭಾಗದಲ್ಲಿ 339, ಕಾಶ್ಮೀರ ವಿಭಾಗದಲ್ಲಿ 11, 814 ಸೀಟುಗಳಿವೆ. ಒಟ್ಟು 1,475 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬಿಜೆಪಿ, ಮಾಜಿ ಸಚಿವ ಅಲ್ತಾಫ್ ಬುಖಾರಿ ಅವರ ಅಪ್ನಿ ಪಾರ್ಟಿ ಮೈತ್ರಿಕೂಟ, ಪೀಪಲ್ಸ್‌ ಅಲಯನ್ಸ್‌ ಫಾರ್‌ ಗುಪ್ಕಾರ್‌ ಡೆಕ್ಲರೇಷನ್‌ (ಪಿಎಜಿಡಿ) ನಡುವೆ ತ್ರಿಕೋನ ಸ್ಪರ್ಧೆ ಇದೆ. ಗುಪ್ಕಾರ್‌ನಲ್ಲಿ ಪಿಡಿಪಿ ಮತ್ತು ನ್ಯಾಶನಲ್‌ ಕಾನ್ಫರೆನ್ಸ್‌ ಜತೆಗೂಡಿವೆ.

ಇದನ್ನೂ ಓದಿ:ಬಿಹಾರ ಮಾಜಿ ಡಿಸಿಎಂ ಸುಶೀಲ್ ಮೋದಿ ಗೆ ರಾಜ್ಯಸಭಾ ಟಿಕೆಟ್

Advertisement

ಮೊದಲ ಹಂತವಾಗಿರುವ ನ.28ರಂದು 280 ಡಿಡಿಸಿಗಳ ಪೈಕಿ 48ಕ್ಕೆ ಚುನಾವಣೆ ನಡೆಯಲಿದೆ. ಈ ಪೈಕಿ 25 ಕಾಶ್ಮೀರ ಮತ್ತು 18 ಜಮ್ಮು ವಲಯದಲ್ಲಿವೆ. ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ರಾಜ್ಯ ಚುನಾವಣ ಆಯುಕ್ತ ಕೆ.ಕೆ.ಶರ್ಮಾ ಹೇಳಿದ್ದಾರೆ.

ಇಬ್ಬರು ಹುತಾತ್ಮ: ಮೊದಲ ಹಂತದ ಡಿಡಿಸಿ ಚುನಾವಣೆ ನಡೆಯಲಿರುವಂತೆಯೇ, ರಜೌರಿಯಲ್ಲಿ ಪಾಕಿಸ್ಥಾನದ ಸೇನಾ ಪಡೆಗಳು ಕದನ ವಿರಾಮ ಉಲ್ಲಂಘಿಸಿ ಗುಂಡು ಹಾರಿಸಿವೆ. ಹೀಗಾಗಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಮತ್ತೆ ಇಬ್ಬರಿಗೆ ಗಾಯಗಳಾಗಿವೆ. ಗುರುವಾರ ಇಬ್ಬರು ಯೋಧರು ಮತ್ತು ಒಬ್ಬ ಜ್ಯೂನಿಯರ್‌ ಕಮಿಷನ್ಡ್ ಆಫೀಸರ್‌ ಪಾಕ್‌ ಯೋಧರ ಗುಂಡಿಗೆ ಬಲಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next