Advertisement

Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

09:57 PM Apr 25, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಈ ಹಿಂದಿನ 24 ಗಂಟೆಗಳಲ್ಲಿ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮವನ್ನು ಚುನಾವಣ ನೀತಿ ಸಂಹಿತೆ ಜಾರಿ ತಂಡಗಳು ಜಪ್ತಿ ಮಾಡಿವೆ. ಇದರೊಂದಿಗೆ ಈವರೆಗೆ 433.39 ಕೋ. ರೂ. ಮೌಲ್ಯದ ಚುನಾವಣ ಅಕ್ರಮವನ್ನು ಪತ್ತೆ ಹಚ್ಚಲಾಗಿದೆ.

Advertisement

1.45 ಕೋ. ರೂ. ನಗದು, 17 ಲಕ್ಷ ರೂ. ಮೌಲ್ಯದ ಮದ್ಯ, 3 ಲ. ರೂ. ಮೌಲ್ಯದ ಮಾದಕ ವಸ್ತು, 55 ಲ. ರೂ. ಮೌಲ್ಯದ ಚಿನ್ನ, 6 ಲ. ರೂ. ಮೌಲ್ಯದ ಉಡುಗೊರೆ, 4 ಲ. ರೂ. ಮೌಲ್ಯದ ಇತರ ಸರಕುಗಳನ್ನು ವಶಕ್ಕೆ ಪಡೆಯಲಾಗಿದೆ.

ಈವರೆಗೆ 86.66 ಕೋ. ರೂ. ನಗದು, 178 ಕೋ. ರೂ. ಮೌಲ್ಯದ ಮದ್ಯ, 11.35 ಕೋ. ರೂ. ಮೌಲ್ಯದ  ಮಾದಕ ವಸ್ತು, 74.35 ಕೋ. ರೂ. ಮೌಲ್ಯದ ಚಿನ್ನ, 1.18 ಕೋ. ರೂ. ಮೌಲ್ಯದ ಬೆಳ್ಳಿ, 8.20 ಕೋ. ರೂ. ಮೌಲ್ಯದ ಉಚಿತ ಉಡುಗೊರೆಗಳು ಮತ್ತು 72.40 ಕೋ. ರೂ. ಮೌಲ್ಯದ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ನಗದು, ಮದ್ಯ, ಅಮೂಲ್ಯ ಲೋಹ, ಮಾದಕ ವಸ್ತು ಸಾಗಣೆಗೆ ಸಂಬಂಧಿಸಿ ಈವರೆಗೆ 2,149 ಎಫ್ಐಆರ್‌ ದಾಖಲಿಸಲಾಗಿದೆ. ಅಬಕಾರಿ  ಅಪರಾಧ ಪ್ರಕರಣದಡಿ 3,025 ಪ್ರಕರಣಗಳನ್ನು ದಾಖಲಿಸಲಾಗಿದೆ. ಸಿ ವಿಜಿಲ್‌ ಅಪ್ಲಿಕೇಶನ್‌ನಡಿ ನೀತಿ ಸಂಹಿತೆ ಉಲ್ಲಂಘನೆಯ 28,228 ದೂರುಗಳು ಆಯೋಗಕ್ಕೆ ಸಲ್ಲಿಕೆಯಾಗಿದ್ದು, ಈ ಪೈಕಿ 26,681 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next