Advertisement

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

04:05 PM Apr 28, 2024 | Team Udayavani |

ಚಿಕ್ಕಬಳ್ಳಾಪುರ: ತೀವ್ರ ಪೈಪೋಟಿಗೆ ಕಾರಣವಾಗಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಚುನಾವಣಾ ಮತದಾನ ಶುಕ್ರವಾರ ಶಾಂತವಾಗಿ ತೆರೆ ಕಂಡಿದೆ. ಆದರೆ ರಾಜಕೀ ಯ ಪಕ್ಷಗಳು ಮತದಾರರಿಗೆ ಅಖಾಡದಲ್ಲಿ ಹಣ, ಮದ್ಯದಹೊಳೆ ಹರಿಸಿದ್ದು ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಅಕ್ರಮ ಮದ್ಯವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

Advertisement

ಹೌದು, ಕಳೆದ ಮಾ.16 ರಿಂದ ಏ.26 ರ ವರೆಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮ ಮದ್ಯ ಸಾಗಾಟ ಪ್ರಕರಣಗಳ ಸಂಪೂರ್ಣ ವಿವರ  ಉದಯವಾಣಿಗೆ ಲಭ್ಯವಾಗಿದ್ದು, ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 16.91ಕೋಟಿ ರೂ. ಮೌಲ್ಯದ ಅಬಕಾರಿ ಅಕ್ರಮಗಳು ಬೆಳಕಿಗೆ ಬಂದಿವೆ.

ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮಾ.16 ರಿಂದ 26ರ ವರೆಗೂ ಬರೋಬ್ಬರಿ 1,93,427.99 ಲೀಟರ್‌ ಭಾರತೀಯ ಮದ್ಯವನ್ನು ವಶಕ್ಕೆ ಪಡೆಯಲಾಗಿದ್ದು, ಅದರ ಒಟ್ಟು ಮೌಲ್ಯ  11,22,44,940 ರೂಗಳಾಗಿವೆ. ಅದೇ ರೀತಿ ಬಿಯರ್‌ ಒಟ್ಟು  1,05,688.592 ಲೀಟರ್‌ ವಶಕ್ಕೆ ಪಡೆಯಲಾಗಿದ್ದು, ಅದರ ಒಟ್ಟು ಮೌಲ್ಯ 2,39,82,973 ರೂ,ಗಳಾಗಿವೆ. ಇನ್ನೂ ಸೇಂದಿ ಒಟ್ಟು 984 ಲೀಟರ್‌ನಷ್ಟು ವಶಕ್ಕೆ ಪಡೆಯಲಾಗಿದ್ದು ಅದರ ಒಟ್ಟು ಮೌಲ್ಯ 86,540 ರೂ,ಗಳಾಗಿವೆ. ಚುನಾವಣಾ ಕಣದಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಒಟ್ಟು 10.495 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದ್ದು,  ಅದರ ಒಟ್ಟು ಮೌಲ್ಯ 4,19,600 ರೂಗಳಾಗಿವೆ.

103 ವಾಹನಗಳ ವಶ: 2.44 ಕೋಟಿ ಮೌಲ್ಯ: ಅಕ್ರಮ ಮದ್ಯ ಮಾರಾಟಕ್ಕೆ ಬಳಸಲಾಗಿದ್ದ ದ್ವಿಚಕ್ರ ವಾಹನ, ತ್ರಿಚಕ್ರದ ಆಟೋಗಳು ಸೇರಿ ಒಟ್ಟು 82 ವಾಹನಗಳನ್ನು ಇಡೀ ಕ್ಷೇತ್ರದಲ್ಲಿ ವಶಕ್ಕೆ ಪಡೆಯಲಾಗಿದ್ದು ಅವುಗಳ ಒಟ್ಟು ಮೌಲ್ಯ 48,75,000 ರೂಗಳಾಗಿವೆ. ಇನ್ನೂ 4 ಚಕ್ರದ ಒಟ್ಟು 7 ಕಾರುಗಳನ್ನು ವಶಕ್ಕೆ ಪಡೆಯಲಾಗಿದ್ದು ಅವುಗಳ ಒಟ್ಟು ಮೌಲ್ಯ 31,80,000 ರೂಗಳಾಗಿದೆ. ಅಲ್ಲದೇ  ಮದ್ಯ ಸಾಗಾಟಕ್ಕೆ ಬಳಕೆ ಮಾಡಲಾಗಿದ್ದ 14  ಬೃಹತ್‌ ವಾಹನಗಳನ್ನು ಜಪ್ತಿ ಮಾಡಲಾಗಿದ್ದು ಅವುಗಳ ಒಟ್ಟು ಮೌಲ್ಯ 2,44,00000 ಕೋಟಿ ರೂ,ಗಳಾಗಿವೆ. ಒಟ್ಟು 103 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು ಅದರ ಒಟ್ಟು ಮೌಲ್ಯ 3 ಕೋಟಿಗೂ ಅಧಿಕವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2.68 ಕೋಟಿ ಮೌಲ್ಯದ ಅಕ್ರಮ :

Advertisement

ಚಿಕ್ಕಬಳ್ಳಾಪುರ ಜಿಲ್ಲೆಗೆ ಸೀಮಿತವಾಗಿ ಬರೋಬ್ಬರಿ 2.68 ಕೋಟಿ ಮೌಲ್ಯದ ಅಬಕಾರಿ ಅಕ್ರಮಗಳು ನಡೆದಿವೆ. ಜಿಲ್ಲೆಯ ಆರು ತಾಲೂಕುಗಳಲ್ಲಿ ಒಟ್ಟು 30,195.790 ಲೀಟರ್‌ ಭಾರತೀಯ ಮದ್ಯ ವಶಕ್ಕೆ ಪಡೆಯಲಾಗಿದ್ದು ಅದರ ಒಟ್ಟು ಮೌಲು 1.66,52,428 ರೂಗಳಾಗಿದೆ. ಅದೇ ರೀತಿ ಜಿಲ್ಲೆಯಲ್ಲಿ 60,17.780 ಬಿಯರ್‌ ವಶಕ್ಕೆ ಪಡೆಯಲಾಗಿದ್ದು ಅದರ ಒಟ್ಟು ಮೌಲ್ಯ 13,81,893 ರೂಗಳಾಗಿದೆ. ಸೇಂದಿ 941 ಲೀಟರ್‌ ವಶಕ್ಕೆ ಪಡೆಯಲಾಗಿದ್ದು, ಅದರ ಒಟ್ಟು ಮೌಲ್ಯ 81,760 ರೂಗಳಾಗಿದೆ. ಜಿಲ್ಲೆಯಲ್ಲಿ 38 ಆಟೋ, ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. 3 ಕಾರು, 4 ಭಾರೀ ಗಾತ್ರದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 1.68,51,081 ರೂ, ಮೌಲ್ಯದ ಅಬಾರಿ ಅಕ್ರಮಗಳು ಬೆಳಕಿಗೆ ಬಂದಿದೆ.

ನೆಲಮಂಗಲ, ಚಿಕ್ಕಬಳ್ಳಾಪುರ, ಯಲಹಂಕ ಟಾಪ್‌

ಇಡೀ ಚಿಕ್ಕಬಳ್ಳಾಪುರ ಲೋಕಸಬಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮ ಮದ್ಯ ಸಾಗಾಟ ಪ್ರಕರಣಗಳಲ್ಲಿ ಜಿಲ್ಲೆಯ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ  ಹಾಗೂ ಬೆಂಗಳೂರು ನಗರ ಜಿಲ್ಲೆಯ ಯಲ ಹಂಕ ಮುಂಚೂಣಿಯಲ್ಲಿವೆ. ಹೊಸಕೋಟೆ ಕೊನೆ ಸ್ಥಾನದಲ್ಲಿದೆ.

ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಾ.16 ರಿಮದ ಏ.26 ರ ರವರೆಗೂ ಒಟ್ಟು 2.68 ಕೋಟಿ ಮೌಲ್ಯದ ಅಕ್ರಮ ಮದ್ಯ ಹಾಗೂ ಮದ್ಯ ಸಾಗಾಟ ಮಾಡುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲು ಮಾಡಲಾಗಿದೆ. ಸುಮಾರು 1.80 ಕೋಟಿ ಮೌಲ್ಯದಷ್ಟು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಮದ್ಯ ಹಾಗೂ ಬಿಯರ್‌ನ್ನು ವಶಕ್ಕೆ ಪಡೆಯಲಾಗಿದೆ.-ಕೆ.ಅಶಾಲತ, ಉಪ ಆಯುಕ್ತೆ, ಅಬಕಾರಿ ಇಲಾಖೆ, ಚಿಕ್ಕಬಳ್ಳಾಪುರ

– ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next