Advertisement
ನಗರದಲ್ಲಿ ಸುಮಾರು 25 ಲಕ್ಷಕ್ಕೂ ಅಧಿಕ ತುಳು-ಕನ್ನಡಿಗರು ನೆಲೆಸಿದ್ದು, ಪ್ರತೀ ಬಾರಿ ಕರ್ನಾಟಕ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಮುಂಬಯಿ ತುಳು-ಕನ್ನಡಿಗರ ಯೋಗದಾನ ಮಹತ್ತರವಾಗಿದೆ. ಈಗಾಗಲೇ ಸುಮಾರು ಶೇ. 50 ರಷ್ಟು ತುಳು-ಕನ್ನಡಿಗರು ಊರಿನ ಕಡೆಗೆ ಮುಖಮಾಡಿದ್ದು, ಇನ್ನುಳಿದ ಸುಮಾರು ಶೇ. 25 ರಷ್ಟು ಮಂದಿ ಮತದಾನ ಮಾಡಲು ಊರಿಗೆ ತೆರಳಲು ಟಿಕೆಟ್ ಸಿಗದೆ ಮತ್ತು ದುಬಾರಿ ಟಿಕೆಟ್ ದರದಿಂದ ಮತದಾನದಿಂದ ವಂಚಿತರಾಗುವ ಭೀತಿಯಲ್ಲಿದ್ದಾರೆ.
ಉಡುಪಿ-ದಕ್ಷಿಣ ಕನ್ನಡ ಈ 2 ಜಿಲ್ಲೆಯವರು ಮತ್ಸéಗಂಧ ರೈಲನ್ನು ಅವಲಂಬಿಸಿದ್ದು, ಕರ್ನಾಟಕ ವಿಧಾನ ಸಭಾ ಚುನಾವಣಾ ದಿನಾಂಕ ನಿಗದಿಯಾದ ದಿನದಿಂದ ಹೆಚ್ಚಿನವರು ರೈಲಿನಲ್ಲಿ ಟಿಕೆಟ್ ಬುಕ್ ಮಾಡಿದ್ದರೂ ಕೂಡಾ, ಅದು ವೇಟಿಂಗ್ ಲಿಸ್ಟ್ ನಲ್ಲಿದ್ದು, ಕನ್‌ಫರ್ಮ್ ಆಗದೆ ಹಲವು ಹಾಗೆಯೇ ಇದೆೆ. ಹಲವು ಮಂದಿ ತುಳು-ಕನ್ನಡಿಗರು ಗುರುವಾರ ಟಿಕೆಟ್ ಕನ್‌ಫರ್ಮ್ ಆಗದೆ ಮತದಾನದಿಂದ ದೂರ ಉಳಿಯಲು ಮುಂದಾಗಿದ್ದಾರೆ. ವಿಶೇಷವೆಂದರೆ ಗುರುವಾರದ ಆರ್‌ಎಸಿ 14, 15, 16, 17 ಸಂಖ್ಯೆಯಲ್ಲಿದ್ದ ಟಿಕೆಟ್‌ಗಳೂ ಕೂಡಾ ಕನ್‌ಫರ್ಮ್ ಆಗದಿರುವುದು ವಿಪರ್ಯಾಸವಾಗಿದೆ. ತುಂಬಿ-ತುಳುಕುತ್ತಿರುವ ಜನರಲ್ ಬೋಗಿ
ರೈಲು ಟಿಕೆಟ್ ಕನ್‌ಫರ್ಮ್ ಆಗದಿದ್ದರೂ ಪರವಾಗಿಲ್ಲ. ಜನರಲ್ ಬೋಗಿಗಳಲ್ಲಿ ಹೋಗೊಣ ಎಂದರೂ ಅದು ಸಾಧ್ಯವಾಗುತ್ತಿಲ್ಲ. ಗುರುವಾರ ಮತ್ಸÂಗಂಧ ಹಾಗೂ ಮಂಗಳೂರು ಎಕ್ಸ್‌ಪ್ರೆಸ್ ರೈಲುಗಳ ಜನರಲ್ ಬೋಗಿಗಳು ತೆರಳುವ ನಿಲ್ದಾಣದಲ್ಲೇ ತುಂಬಿ ತುಳುಕಿವೆ. ನೂರಾರು ಮಂದಿ ಈ ದೃಶ್ಯ ಕಂಡು ವಾಪಸಾದ ಪ್ರಸಂಗ ನಡೆದಿದೆೆ.
Related Articles
ಕಳೆದ ಎರಡು-ಮೂರು ದಿನಗಳಿಂದ ಹಲವು ಮಂದಿ ತುಳು-ಕನ್ನಡಿಗರು ಮತದಾನಕ್ಕೆ ಹೋಗಲು ವಿಶೇಷ ಬಸ್‌ನ ವ್ಯವಸ್ಥೆ ಇದೆಯೇ ಎಂದು ಫೋನಾಯಿಸಿ ಪ್ರಶ್ನಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ತುಳು-ಕನ್ನಡಿಗರಿಗೆ ಉಡುಪಿ-ದಕ್ಷಿಣ ಕನ್ನಡಕ್ಕೆ ಸಂಬಂಧಪಟ್ಟ ಆಯಾಯ ಕ್ಷೇತ್ರಗಳ ಅಭ್ಯರ್ಥಿಗಳು ಮತದಾನ ಮಾಡಲು ಬಸ್‌ನ ವ್ಯವಸ್ಥೆಯನ್ನು ಆಯೋಜಿಸುತ್ತಿದ್ದಾರಂತೆ, ಅದೇ ರೀತಿ ಮುಂಬಯಿಗರಿಗೆ ಅಂತಹ ಸೌಲಭ್ಯಗಳು ಉಂಟೇ ಎಂದು ಇಲ್ಲಿನ ತುಳು-ಕನ್ನಡಿಗರು ಪತ್ರಿಕಾ ಕಚೇರಿಗೆ ಕರೆ ಮಾಡಿ ಪ್ರಶ್ನಿಸುತ್ತಿದ್ದಾರೆ.
Advertisement
ಅಂತೆ-ಕಂತೆಗಳ ಕತೆಯಾಗುತ್ತಿದೆಇನ್ನೂ ಕೆಲವರು ಊರಿಗೆ ಮತದಾನಕ್ಕಾಗಿ ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಮಾಡಿದ್ದಾರೆ. ಅದು ಎಲ್ಲಿಂದ ಮತ್ತು ಯಾವಾಗ ತೆರಳುತ್ತದೆ ಎಂಬುವುದರ ಅರಿವಿಲ್ಲ…! ನಿಮಗೇನಾದರೂ ಗೊತ್ತಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ.
ವಿಶೇಷ ಬಸ್‌ಗಳ ವ್ಯವಸ್ಥೆ ಉಡುಪಿ-ದಕ್ಷಿಣ ಕನ್ನಡದವರಿಗೆ ಮಾಡಲಾಗಿದೆಯೇ ಅಥವಾ ಇನ್ನಿತರೆಡೆಗಳಿಗೆ ಮಾಡಲಾಗಿದೆಯೇ ಎಂಬುವುದು ಕೂಡಾ ಯಕ್ಷಪ್ರಶ್ನೆಯಾಗಿದೆ. ದರ ಏರಿಕೆ
ಬೇಸಗೆ ರಜೆಯ ಸಂದರ್ಭದಲ್ಲಿ ಅಣಬೆಯಂತೆ ತಲೆ ಎತ್ತುವ ಖಾಸಗಿ ಬಸ್‌ಗಳು ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಇಲ್ಲಿನ ತುಳು-ಕನ್ನಡಿಗರನ್ನು ಮನ ಬಂದಂತೆ ಕೊಳ್ಳೆಹೊಡೆಯುತ್ತಿವೆ. ಇದೀಗ ಮತದಾನಕ್ಕೆ ತೆರಳಲು ಊರಿಗೆ ಹೋಗುವ ಅಗತ್ಯತೆವನ್ನು ಮನಗಂಡ ಖಾಸಗಿ ಬಸ್‌ಗಳ ದರಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿವೆ. ನಾನ್ ಎಸಿ ಸಿಟ್ಟಿಂಗ್ 1800-2000, ನಾನ್ ಎಸಿ ಸ್ಲಿàಪರ್ 2000-2200, ಎಸಿ ಸಿಟ್ಟಿಂಗ್ 2600-2800, ಎಸಿ ಸ್ಲಿàಪರ್ 3300-3500 ರೂ. ಗಳ ದರಗಳನ್ನು ಹೇರಲಾಗಿದೆ. ಇದು ದಿನಂಪ್ರತಿ ಏರಿಕೆಯಾಗುತ್ತಿದ್ದು, ಮತದಾನಕ್ಕಾಗಿ ತೆರಳುವ ತುಳು-ಕನ್ನಡಿಗರಿಗೆ ಬಿಸಿತುಪ್ಪದಂತಾಗಿದೆ. ಖಾಸಗಿ ಬಸ್‌ಗಳು ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತಿದ್ದು, ಅದರಲ್ಲೂ ಸೀಟ್‌ಗಳ ಅಭಾವದಿಂದ ಮತ್ತು ಅಧಿಕ ದರದಿಂದ ತುಳು-ಕನ್ನಡಿಗರು ಮತದಾನಕ್ಕೆ ತೆರಳದೆ ಹಿಂದೇಟು ಹಾಕುವಂತಾಗಿದೆ. ಕಳೆದ ವಾರ ತಂಗಿಯ ಮದುವೆ ಕಾರ್ಯ ಮುಗಿಸಿ ಕೆಲಸದ ನಿಮಿತ್ತ ಮುಂಬಯಿಗೆ ಬಂದ ನಾನು ಮತದಾನ ಮಾಡಲು ಪುನಃ ಊರಿಗೆ ಹೋಗುವ ಯೋಚನೆಯೊಂದಿಗೆ ಶುಕ್ರವಾರದ ಟಿಕೆಟ್ ಬುಕ್ ಮಾಡಲು ಬಯಸ್ಸಿದ್ದೆ. ಆದರೆ ಬಸ್ ಮತ್ತು ರೈಲಿನಲ್ಲಿ ಟಿಕೆಟ್ ಸಿಗದಿದ್ದ ಕಾರಣ ನಿರಾಸೆಯಾಗಿದೆ
ಶ್ವೇತಾ ಅರುಣ್ ಶೆಟ್ಟಿ ಮೂಡಬಿದಿರೆ, ಡೊಂಬಿವಲಿ.