Advertisement
3 ಪದವೀಧರ, 3 ಶಿಕ್ಷಕ ಕ್ಷೇತ್ರ2018ರ ಚುನಾವಣೆಯಲ್ಲಿ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಚಂದ್ರಶೇಖರ್ ಪಾಟೀಲ್, ನೈಋತ್ಯ ಪದವೀಧರ ಕ್ಷೇತ್ರವನ್ನು ಬಿಜೆಪಿಯಿಂದ ಪ್ರತಿನಿಧಿಸಿದ್ದ ಆಯನೂರು ಮಂಜುನಾಥ್, ಬೆಂಗಳೂರು ಪದವೀಧರ ಕ್ಷೇತ್ರದ ಬಿಜೆಪಿ ಸದಸ್ಯ ಅ. ದೇವೇಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಸದಸ್ಯ ವೈ.ಎ.ನಾರಾಯಣ ಸ್ವಾಮಿ, ನೈಋತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಸದಸ್ಯ ಭೋಜೇಗೌಡ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ನಿಂದ ಪ್ರತಿನಿಧಿಸುತ್ತಿದ್ದ ಮರಿತಿಬ್ಬೇಗೌಡ ಅವರ ಅಧಿಕಾರಾವಧಿಯು ಜೂ.21ಕ್ಕೆ ಮುಕ್ತಾಯಗೊಳ್ಳಲಿದೆ.
Related Articles
ಚುನಾವಣೆ ನಡೆಯಲಿರುವ ಕ್ಷೇತ್ರ ವ್ಯಾಪ್ತಿಯಲ್ಲಿ ಗುರುವಾರದಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಮೇ 9ರಂದು ಅಧಿಕೃತ ಅಧಿಸೂಚನೆ ಹೊರಬೀಳಲಿದೆ. ಅಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ, ಮೇ 16ರ ವರೆಗೆ ಉಮೇದುವಾರಿಕೆಗೆ, 17ರಂದು ನಾಮಪತ್ರಗಳ ಪರಿಶೀಲನೆ, ಹಿಂಪಡೆ ಯಲು ಮೇ 20ರ ವರೆಗೆ ಕಾಲಾವಕಾಶ ಇದೆ. ಜೂ.3ರ ಬೆಳಗ್ಗೆ 8ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದ್ದು, ಜೂ.6ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
Advertisement
ಶೆಟ್ಟರ್, ತೇಜಸ್ವಿನಿ, ನಂಜುಂಡಿ ಸ್ಥಾನವೂ ತೆರವುಇವಿಷ್ಟೇ ಅಲ್ಲದೆ, ಇತ್ತೀಚೆಗೆ ಕಾಂಗ್ರೆಸ್‌ನಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿಜೆಪಿಯ ತೇಜಸ್ವಿನಿ ಗೌಡ, ಕೆ.ಪಿ.ನಂಜುಂಡಿ ಕೂಡ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಸ್ಥಾನಗಳೂ ತೆರವಾಗಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಹುದ್ದೆಗಳಿಗೂ ಚುನಾವಣೆ ನಡೆಯಬೇಕಾಗುತ್ತದೆ. ಯಾವ ಕ್ಷೇತ್ರದಲ್ಲಿ ಯಾರಿದ್ದರು?
ಈಶಾನ್ಯ ಪದವೀಧರ: ಚಂದ್ರಶೇಖರ್ ಪಾಟೀಲ್ ( ಕಾಂಗ್ರೆಸ್)
ನೈಋತ್ಯ ಪದವೀಧರ: ಆಯನೂರು ಮಂಜುನಾಥ್ (ಹಿಂದೆ ಬಿಜೆಪಿ, ಈಗ ಕಾಂಗ್ರೆಸ್)
ಬೆಂಗಳೂರು ಪದವೀಧರ: ಅ.ದೇವೇಗೌಡ (ಬಿಜೆಪಿ)
ಆಗ್ನೇಯ ಶಿಕ್ಷಕರು: ವೈ.ಎ.ನಾರಾಯಣ ಸ್ವಾಮಿ (ಬಿಜೆಪಿ)
ನೈಋತ್ಯ ಶಿಕ್ಷಕರು: ಭೋಜೇಗೌಡ (ಜೆಡಿಎಸ್)
ದಕ್ಷಿಣ ಶಿಕ್ಷಕರು: ಮರಿತಿಬ್ಬೇಗೌಡ (ಹಿಂದೆ ಜೆಡಿಎಸ್, ಈಗ ಕಾಂಗ್ರೆಸ್) ಪರಿಷತ್‌ನ ಸದ್ಯದ ಬಲಾಬಲ
ಬಿಜೆಪಿ 32
ಕಾಂಗ್ರೆಸ್ 29
ಜೆಡಿಎಸ್ 07
ಸ್ವತಂತ್ರ 01
ಖಾಲಿ 05
ಸಭಾಪತಿ 01
ಒಟ್ಟು 75