Advertisement

ಪಂಚಾಯಿತಿಗಳಿಗೆ ನ.12ಕ್ಕೆ ಚುನಾವಣೆ

11:00 PM Oct 20, 2019 | Lakshmi GovindaRaju |

ಬೆಂಗಳೂರು: ವಿವಿಧ ಕಾರಣಗಳಿಂದ ತೆರವಾಗಿ ರುವ ರಾಜ್ಯದ 1 ಜಿಲ್ಲಾ ಪಂಚಾಯಿತಿ, 4 ತಾಲೂಕು ಪಂಚಾಯಿತಿ ಹಾಗೂ 213 ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಿಗದಿಪಡಿಸಿ, ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.

Advertisement

ಅದರಂತೆ, ಈ ಪಂಚಾಯಿತಿಗಳಲ್ಲಿ ತೆರವುಗೊಂಡಿರುವ ಸದಸ್ಯ ಸ್ಥಾನಗಳಿಗೆ ನ.12ರಂದು ಮತದಾನ ನಡೆ ಯಲಿದೆ. ನಾಮಪತ್ರ ಸಲ್ಲಿಸಲು ಅ.31 ಕೊನೆಯ ದಿನವಾಗಿದ್ದು, ನ.14ಕ್ಕೆ ಫ‌ಲಿತಾಂಶ ಹೊರಬೀಳ ಲಿದೆ. ಈ ಕ್ಷೇತ್ರಗಳಲ್ಲಿ ಅ.28ರಿಂದ ನ.14ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರಲಿದೆ.

ಎಲ್ಲೆಲ್ಲಿ ಉಪ ಚುನಾವಣೆ: ಚಾಮರಾಜನಗರ ಜಿಲ್ಲೆಯ ಹರದನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರ, ಯಳಂದೂರು ತಾಲೂಕಿನ ಯರಿಯೂರು ತಾಲೂಕು ಪಂಚಾಯಿತಿ ಕ್ಷೇತ್ರ, ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಬಾಕೂìರು, ಗದಗ ಜಿಲ್ಲೆ ಬಿಂಕದಕಟ್ಟಿ, ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಜಮಲಾಪೂರ ತಾಲೂಕು ಪಂಚಾಯಿತಿ ಕ್ಷೇತ್ರ ಹಾಗೂ ವಿವಿಧ 213 ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next