ಹೊಸದಿಲ್ಲಿ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮ ಗೊಳಿಸುವ ನಿಟ್ಟಿನಲ್ಲಿ ಬಿಜೆಪಿಯ ಕೇಂದ್ರ ಚುನಾವಣೆ ಸಮಿತಿ (ಸಿಇಸಿ) ಶುಕ್ರವಾರ ಸಭೆ ನಡೆಸಿದೆ.
ಈ ವೇಳೆ ಮಧ್ಯಪ್ರದೇಶದಲ್ಲಿ ಮಾಡಿದಂತೆಯೇ ರಾಜಸ್ಥಾನದಲ್ಲಿಯೂ ಪಕ್ಷದ ವರಿಷ್ಠರು, ಕೇಂದ್ರ ಸಚಿವರುಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ, ರಕ್ಷಣ ಸಚಿವ ರಾಜನಾಥ ಸಿಂಗ್, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಚುನಾವಣೆಗೆ ಸಜ್ಜುಗೊಂಡಿರುವ ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣದ ರಾಜ್ಯ ನಾಯಕರೊಂದಿಗೆ ಕಳೆದ ಕೆಲವು ದಿನಗಳಿಂದ ಕೇಂದ್ರ ನಾಯಕರು ಸಾಲು-ಸಾಲು ಸಭೆ ನಡೆಸಿರುವ ಬೆನ್ನಲ್ಲೇ ಸಿಇಸಿ ಸಭೆ ನಡೆದಿ ರುವುದು ಮಹತ್ವ ಪಡೆದು ಕೊಂಡಿದೆ.
ಈವರೆಗೆ ಸಿಇಸಿ 3 ಸಭೆಗಳನ್ನು ನಡೆಸಲಾಗಿದ್ದು, ಈಗಿನದು ಕೊನೆಯ ಸಭೆ ಎಂದೂ ಹೇಳಲಾಗಿದೆ. ಈ ಸಭೆಯಲ್ಲಿ ಬಹುತೇಕ ಅಭ್ಯರ್ಥಿಗಳ ನಿರ್ಣಯವಾಗಿರಬಹುದೆಂಬ ಮಾತೂ ಕೇಳಿಬಂದಿದೆ.