Advertisement

ಮತ ಎಣಿಕೆಗೆ NITK ಸಜ್ಜು: ಚುನಾವಣಾಧಿಕಾರಿಗಳಿಂದ ಅಂತಿಮ ಹಂತದ ಸಿದ್ಧತೆ ಪರಿಶೀಲನೆ

10:31 PM May 12, 2023 | Team Udayavani |

– ಪ್ರತಿ ಮತ ಎಣಿಕೆ ಟೇಬಲ್‌ಗೆ ಒಂದರಂತೆ ಸಿಸಿಟಿವಿ

Advertisement

– ಮತಯಂತ್ರದಲ್ಲಿ ಎಣಿಕೆ ವೇಳೆ ದೋಷ ಕಂಡುಬಂದರೆ, ಅದಕ್ಕೆ ಸಂಬಂಧಿಸಿದ ವಿವಿಪಾಟ್‌ನಲ್ಲಿರುವ ಸ್ಲಿಪ್‌ಗಳ ಎಣಿಕೆ

ಮಂಗಳೂರು: ಹೊರವಲಯದ ಎನ್‌ಐಟಿಕೆ ಸುರತ್ಕಲ್‌ನಲ್ಲಿ ಮತ ಎಣಿಕೆ ನಡೆಯಲಿದ್ದು ವ್ಯಾಪಕ ಸಿದ್ಧತೆ ಪೂರ್ಣಗೊಂಡಿದೆ. ಶುಕ್ರವಾರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌ ಅವರು ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು.

ಒಂದು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ, 18 ಟೇಬಲ್‌ಗಳಲ್ಲಿ ಇವಿಎಂ ಮತ ಎಣಿಕೆ ಹಾಗೂ 5 ಟೇಬಲ್‌ಗಳಲ್ಲಿ ಅಂಚೆ ಮತ ಎಣಿಕೆ ನಡೆಯಲಿದೆ, ಹೀಗೆ 8 ಕ್ಷೇತ್ರಗಳಿಗೆ ಒಟ್ಟು 112 ಇವಿಎಂ ಟೇಬಲ್‌ ಮತ್ತು 40 ಅಂಚೆ ಮತ ಟೇಬಲ್‌ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 8 ಕ್ಕೆ ಸ್ಟ್ರಾಂಗ್‌ ರೂಂಗಳನ್ನು ತೆರೆದು ಆರಂಭದಲ್ಲಿ ಅಂಚೆ ಮತ ಎಣಿಕೆ ಪ್ರಾರಂಭಿಸಲಾಗುವುದು, 30 ನಿಮಿಷಗಳ ಬಳಿಕ ಮತ ಯಂತ್ರಗಳ ಎಣಿಕೆ ಶುರು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆಯಾ ಕ್ಷೇತ್ರಗಳಲ್ಲಿ ಗರಿಷ್ಠ 18 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ, ಅಂತಿಮವಾಗಿ ಸುಮಾರು 2 ಗಂಟೆ ವೇಳೆಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆಗಳಿವೆ.

ಮತ ಎಣಿಕೆ ಕೇಂದ್ರದ ಆವರಣದ 100 ಮೀ.ವ್ಯಾಪ್ತಿಯೊಳಗೆ ಅನಧಿಕೃತ ವ್ಯಕ್ತಿಗಳು, ವಾಹನಗಳ ಪ್ರವೇಶ ನಿಷೇಧಿಸಿ ಭದ್ರತಾ ವಲಯ ಸ್ಥಾಪಿಸಲಾಗಿದೆ. ಮೂರು ಹಂತಗಳಲ್ಲಿ ಭದ್ರತೆ ಕಲ್ಪಿಸಲಾಗಿದೆ. 1000ಕ್ಕೂ ಅಧಿಕ ಪೊಲೀಸ್‌, ಅರೆಸೇನಾಪಡೆ, ಗೃಹರಕ್ಷಕರನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಅಲ್ಲದೆ ಸೆಕ್ಷನ್‌ 144 ರನ್ವಯ ಮೇ.13 ರ ಬೆಳಗ್ಗೆ 5 ರಿಂದ ಮಧ್ಯರಾತ್ರಿ 12 ರವರೆಗೆ ಜಿಲ್ಲಾದ್ಯಂತ ಸೆಕ್ಷನ್‌ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

Advertisement

ಇದನ್ನೂ ಓದಿ: ಪೈಲಟ್ ಮಾಡಿದ ಎಡವಟ್ಟಿಗೆ 3 ತಿಂಗಳು ಅಮಾನತು ಶಿಕ್ಷೆ, ಏರ್ ಲೈನ್ಸ್ ಗೆ 30 ಲಕ್ಷ ರೂ. ದಂಡ

Advertisement

Udayavani is now on Telegram. Click here to join our channel and stay updated with the latest news.

Next