Advertisement
ಕಳೆದೊಂದು ತಿಂಗಳಿನಿಂದ ವಿಧಾನ ಪರಿಷತ್ ಚುನಾವಣೆಗಾಗಿ ಮೂರು ಪಕ್ಷಗಳ ಅಭ್ಯರ್ಥಿಗಳು ನಾಯಕರೊಂದಿಗೆ ಬಹಿರಂಗ ಪ್ರಚಾರ ನಡೆಸಿದ್ದರು. ಈಗ ಮನೆ ಮನೆ ಪ್ರಚಾರ ಶುರುವಾಗಿದ್ದು, ಮತದಾರರನ್ನು ಮನವೊಲಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.
Related Articles
Advertisement
ಇದನ್ನೂ ಓದಿ;- ಬೆಳ್ತಂಗಡಿ ಸೋಮಾವತಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು
ಅಭ್ಯರ್ಥಿಗಳಿಗೆ ಮಾತ್ರವಲ್ಲ ಪಕ್ಷಗಳಿಗೂ ಪ್ರತಿಷ್ಠೆಯಾಗಿರುವ ಈ ಚುನಾವಣೆಯಲ್ಲಿ ವಿಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುವುದು ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಗೆಲುವು ಸಾಧಿಸಿದರೆ ಅದು ಅಭ್ಯರ್ಥಿ ಮೂರನೇ ಗೆಲುವಾಗಲಿದೆ. ಈ ಚುನಾವಣೆಯಲ್ಲಿ ಎಂಎಲ್‌ಸಿ ಕುರ್ಚಿ ಯಾರಿಗೆ ಲಭಿಸಲಿದೆ ಎನ್ನುವ ಚರ್ಚೆ ಶುರುವಾಗಿದೆ.
ಕಮಲ ಅರಳುವ ನಿರೀಕ್ಷೆ: ಇಂದು ಮತದಾನ ನಡೆಯಲಿದ್ದು, ಚುನಾವಣಾ ಹಂತದ ಕ್ಲೈಮಾಕ್ಸ್ ತಲುಪಿದೆ. ಮತದಾನಕ್ಕೆ ಕೌಂಟ್ ಡೌನ್ ಶುರುವಾಗಿದ್ದು ತೀವ್ರ ಕುತೂಹಲ ಮೂಡಿಸಿದೆ. ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆ ಒಳಗೊಂಡಂತೆ ಎಂಟು ಶಾಸಕರನ್ನು ಹೊಂದಿದ್ದು, ಅದರಲ್ಲಿ ಜೆಡಿಎಸ್ ಐದು ಶಾಸಕರನ್ನು ಮತ್ತು ಕಾಂಗ್ರೆಸ್ ಮೂರು ಶಾಸಕರನ್ನು ಹೊಂದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ನೇರ ಹಣಾಹಣಿಯಿದ್ದು, ಜಿಲ್ಲೆಯಲ್ಲಿ ಶಾಸಕರ ಬಲವಿಲ್ಲದ ಬಿಜೆಪಿ ಕಮಲ ಅರಳುವ ನಿರೀಕ್ಷೆಯಲ್ಲಿದೆ.