ಹೊಸದಿಲ್ಲಿ: ಅಚ್ಚರಿಯ ಬೆಳವಣಿಗೆಯಲ್ಲಿ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ಕೆಲವೇ ದಿನ ಗಳು ಬಾಕಿಯಿರುವಂತೆಯೇ ಚುನಾವಣೆ ಆಯುಕ್ತರಲ್ಲಿ ಒಬ್ಬರಾಗಿರುವ ಅರುಣ್ ಗೋಯಲ್ ಶನಿವಾರ ದಿಢೀರ್ ರಾಜೀ
ನಾಮೆ ನೀಡಿದ್ದಾರೆ.
ಅವರ ಅಧಿಕಾರ ಅವಧಿ 2027ರ ವರೆಗೆ ಇದ್ದರೂ ಏಕಾಏಕಿ ಹುದ್ದೆ ತ್ಯಜಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಕೇಂದ್ರ ಕಾನೂನು ಸಚಿವಾಲಯವು ಈ ಬಗ್ಗೆ ಮಾಹಿತಿ ನೀಡಿದ್ದು, ರಾಷ್ಟ್ರಪತಿ ರಾಜೀನಾಮೆ ಸ್ವೀಕರಿಸಿದ್ದಾರೆ ಎಂದು ಪ್ರಕಟಿಸಿದೆ. ಯಾವ ಕಾರಣಕ್ಕಾಗಿ ಅವರು ರಾಜೀನಾಮೆ ನೀಡಿದ್ದಾರೆ ಎಂಬ ವಿಚಾರ ಬಹಿರಂಗವಾಗಿಲ್ಲ. ಈಗ ಅರುಣ್ ರಾಜೀನಾಮೆಯೊಂದಿಗೆ ಆಯೋಗದಲ್ಲಿ ಮುಖ್ಯ ಚುನಾವಣೆ ಆಯುಕ್ತ ರಾಜೀವ್ ಕುಮಾರ್ ಮಾತ್ರವೇ ಉಳಿದಿದ್ದಾರೆ.
1985ರ ಬ್ಯಾಚ್‌ನ ಐಎಎಸ್ ಅಧಿಕಾರಿ ಯಾಗಿರುವ ಅರುಣ್ ಕೇಂದ್ರ ಬೃಹತ್ ಕಾರ್ಖಾನೆಗಳ ಸಚಿವಾಲಯದ ಕಾರ್ಯದರ್ಶಿಯೂ ಆಗಿದ್ದರು.