Advertisement

ಚುನಾವಣಾ ಆಯೋಗಕ್ಕೆ ಆ್ಯಪ್‌ ಮೂಲಕ ದೂರು ಕೊಡಿ

10:14 AM Sep 17, 2018 | |

ಹೊಸದಿಲ್ಲಿ : ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಅದರ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲು ಮೊಬೈಲ್‌ ಅಪ್ಲಿಕೇಶನ್‌ ಅನ್ನು ಚುನಾವಣಾ ಆಯೋಗ ಅಭಿವೃದ್ಧಿ ಪಡಿಸಿದ್ದು, ಇದನ್ನು ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಿಜೋರಾಂ ವಿಧಾನಸಭೆ ಚುನಾವಣೆ ವೇಳೆ ಬಳಸಲಾಗುತ್ತದೆ.

Advertisement

ಸಿ ವಿಜಿಲ್‌ ಎಂಬ ಹೆಸರಿನ ಮೊಬೈಲ್‌ ಅಪ್ಲಿಕೇಶನ್‌ ಮೂಲಕ ನೀತಿ ಸಂಹಿತೆ ಉಲ್ಲಂಘನೆಯ ಚಿತ್ರಗಳು  ಮತ್ತು ವೀಡಿಯೋಗಳನ್ನು  ಕಳುಹಿಸಬಹುದಾಗಿದೆ. ಉಲ್ಲಂಘನೆ ನಡೆದ ಸ್ಥಳದ ಮಾಹಿತಿಯನ್ನೂ ಅಪ್ಲಿಕೇಶನ್‌ ದಾಖಲಿಸಿಕೊಳ್ಳಲಿದೆ. 100 ನಿಮಿಷಗಳಲ್ಲೇ ದೂರಿಗೆ ಕೈಗೊಂಡ ಕ್ರಮಗಳ ಬಗ್ಗೆ ಪ್ರತಿಕ್ರಿಯೆಯನ್ನು ದೂರು ನೀಡಿದವರಿಗೆ ಒದಗಿಸಲಾಗುತ್ತದೆ ಎಂದು ಸಿಇಸಿ ಒ.ಪಿ.ರಾವತ್‌ ಹೇಳಿದ್ದಾರೆ.
 ಕರ್ನಾಟಕ ಚುನಾವಣೆಯಲ್ಲೂ ಪ್ರಯೋಗಾತ್ಮಕವಾಗಿ ಬಳಸಲಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ ಎಂದು ರಾವತ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next