Advertisement
ಲೋಕಸಭಾ ಚುನಾವಣೆ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ. ಇತ್ತೀಚೆಗೆ, ಈ ಸರಣಿಯ ಟ್ರೈಲರ್ ವೀಕ್ಷಿಸಿದ ಅನಂತರ ಆಯೋಗ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ. ಟ್ರೈಲರ್‌ನಲ್ಲಿ ಮೋದಿಯವರ ಜೀವನದ ಎಲ್ಲಾ ಘಟ್ಟಗಳನ್ನೂ ಚಿತ್ರಿಸಲಾಗಿದ್ದು, ಸಾಮಾನ್ಯ ಬಾಲಕನೊಬ್ಬ ರಾಷ್ಟ್ರನಾಯಕನಾದ ಕಥಾಹಂದರವಿದೆ. ಈ ಹಿನ್ನೆಲೆಯಲ್ಲಿ ವೆಬ್ ಸರಣಿಯ ಪ್ರಸಾರಕ್ಕೆ ತಡೆ ವಿಧಿಸಲಾಗಿದೆ ಎಂದು ಹೇಳಲಾಗಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಬಾಲಿವುಡ್ ನಟ ಸನ್ನಿ ಡಿಯೋಲ್, ದಿಲ್ಲಿಯಲ್ಲಿ ಶುಕ್ರವಾರ ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಪಿಸುಪಿಸು ಮಾತುಗಳಿಗೆ ನಾಂದಿ ಹಾಡಿದೆ. ಹಾಲಿ ಲೋಕಸಭಾ ಚುನಾವಣೆಗಾಗಿ ಪಂಜಾಬ್‌ನ ಮೂರು ಕ್ಷೇತ್ರಗಳಿಗೆ (ಅಮೃತಸರ, ಗುರುದಾಸ್‌ಪುರ ಮತ್ತು ಹೋಶಿಯಾಪುರ್) ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿಲ್ಲ. ಸೂಕ್ತ ಅಭ್ಯರ್ಥಿಗಳಿಗಾಗಿ ಬಿಜೆಪಿ ಹುಡುಕಾಟ ನಡೆಸುತ್ತಿದೆ. ಹಾಗಾಗಿ, ಅಮಿತ್ ಶಾ ಅವರು, ಸನ್ನಿ ಡಿಯೋಲ್ ಅವರನ್ನು ಅಮೃತಸರದಿಂದ ಕಣಕ್ಕಿಳಿಸಲು ಪ್ರಯತ್ನಿಸಿರಬಹುದೇ ಎಂಬ ಕುತೂಹಲ ಎದ್ದಿದೆ.