ಪಾಟ್ನಾ: ಸುದೀರ್ಘ ಹಂತದಲ್ಲಿ ಮತದಾನ ನಡೆಸುವ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅಸಮಾಧಾನ ಹೊರ ಹಾಕಿದ್ದು, 2 ಹಂತಗಳ ನಡುವೆ ಅವಧಿ ಕಡಿಮೆ ದಿನಗಳದ್ದಾಗಿರಬೇಕು ಎಂದಿದ್ದಾರೆ.
ಪಾಟ್ನಾದಲ್ಲಿ ಕೊನೇಯ ಮತ್ತು 7 ನೇ ಹಂತದ ಚುನಾವಣೆಯಲ್ಲಿ ಹಕ್ಕು ಚಲಾಯಿಸಿದ ನಿತೀಶ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿದರು.
ಚುನಾವಣಾ ಆಯೋಗ 2 ಮತದಾನ ದಿನಾಂಕಗಳ ನಡುವೆ ಹೆಚ್ಚು ಗಡುವು ಇಡಬಾರದು. ಚುನಾವಣೆಯನ್ನು ಪಕ್ಷಗಳೊಂದಿಗೆ ಸಮಾಲೋಚಿಸಿದ ಬಳಿಕ ಚುನಾವಣಾ ಆಯೋಗ ನಡೆಸಬೇಕು. ನಾನು ಎಲ್ಲಾ ಪಕ್ಷಗಳಿಗೂ ಪತ್ರ ಬರೆತು ಈ ಕುರಿತು ಒಮ್ಮತಕ್ಕೆ ಬರುವಂತೆ ಮನವಿ ಮಾಡುತ್ತೇನೆ ಎಂದರು.
ನಾಥುರಾಮ್ ಗೋಡ್ಸೆ ದೇಶಭಕ್ತ ಎಂದು ಹೇಳಿಕೆ ನೀಡಿರುವ ಸಾಧ್ವಿ ಪ್ರಜ್ಞಾಸಿಂಗ್ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳುವುದು ಪಕ್ಷದ ಆಂತರಿಕ ವಿಚಾರ,ಆದರೆ ಬಿಜೆಪಿ ಅಂತಹ ಹೇಳಿಕೆಗಳನ್ನು ಸಹಿಸುವುದಿಲ್ಲ.ಆ ಹೇಳಿಕೆ ಸಂಪೂರ್ಣ ತಪ್ಪುಎಂದರು.