Advertisement

Poll: ಪಶ್ಚಿಮಬಂಗಾಳ ಡಿಜಿಪಿ, 6 ರಾಜ್ಯಗಳ ಗೃಹ ಕಾರ್ಯದರ್ಶಿಗಳ ವರ್ಗಾವಣೆ; ಚುನಾವಣಾ ಆಯೋಗ

03:05 PM Mar 18, 2024 | Team Udayavani |

ನವದೆಹಲಿ: ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆ ಬೆನ್ನಲ್ಲೇ ಚುನಾವಣಾ ಆಯೋಗ ಸೋಮವಾರ (ಮಾರ್ಚ್‌ 18) ಗುಜರಾತ್‌, ಬಿಹಾರ,, ಉತ್ತರಪ್ರದೇಶ ಸೇರಿದಂತೆ ಆರು ರಾಜ್ಯಗಳ ಗೃಹ ಕಾರ್ಯದರ್ಶಿಗಳನ್ನು ಹಾಗೂ ಪಶ್ಚಿಮಬಂಗಾಳದ ಡಿಜಿಪಿಯನ್ನು ವರ್ಗಾವಣೆಗೊಳಿಸಿ ಆದೇಶ ನೀಡಿದೆ.

Advertisement

ಇದನ್ನೂ ಓದಿ:Arundhathi Nair: ಭೀಕರ ರಸ್ತೆ ಅಪಘಾತ; ಸಾವು – ಬದುಕಿನ ಹೋರಾಟದಲ್ಲಿ ಖ್ಯಾತ ನಟಿ

ಲೋಕಸಭಾ ಚುನಾವಣೆ ವೇಳೆ ಚುನಾವಣಾ ಆಯೋಗ ಇಂತಹ ಕ್ರಮಗಳನ್ನು ತೆಗೆದುಕೊಳ್ಳುವುದು ಹೊಸ ಸಂಪ್ರದಾಯವಲ್ಲ. ಜಾರ್ಖಂಡ್‌, ಹಿಮಾಚಲಪ್ರದೇಶ ಮತ್ತು ಉತ್ತರಾಖಂಡ್‌ ಗೃಹ ಕಾರ್ಯದರ್ಶಿಗಳನ್ನು ವರ್ಗಾವಣೆ ಮಾಡಿದೆ. ಅದೇ ರೀತಿ ಮಿಜೋರಾಂ ಮತ್ತು ಹಿಮಾಚಲ್‌ ಪ್ರದೇಶದ ಹಿರಿಯ ಅಧಿಕಾರಿಗಳನ್ನು ಕೂಡಾ ವರ್ಗಾವಣೆ ಮಾಡಲಾಗಿದೆ.

ಮಹಾರಾಷ್ಟ್ರದ ಬೃಹನ್ಮುಂಬಯಿ ಮುನ್ಸಿಪಲ್‌ ಕಾರ್ಪೋರೇಶನ್‌ ಕಮಿಷನರ್‌ ಇಕ್ಬಾಲ್‌ ಸಿಂಗ್‌ ಚಹಾಲ್‌, ಡೆಪ್ಯುಟಿ ಕಮಿಷನರ್‌ ಅನ್ನು ವರ್ಗಾವಣೆ ಮಾಡಲಾಗಿದೆ.

ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಚುನಾವಣಾ ಆಯೋಗ ಶನಿವಾರ, ಏಪ್ರಿಲ್‌ 19ರಿಂದ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next