Advertisement

ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡ NCP, TMC ಮತ್ತು CPI

08:27 PM Apr 10, 2023 | Team Udayavani |

ನವದೆಹಲಿ : ಭಾರತೀಯ ಚುನಾವಣಾ ಆಯೋಗ (ECI) ಸೋಮವಾರ ತೃಣಮೂಲ ಕಾಂಗ್ರೆಸ್, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (NCP) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI) ಪಕ್ಷಗಳ ರಾಷ್ಟ್ರೀಯ ಪಕ್ಷ ಸ್ಥಾನಮಾನವನ್ನು ಹಿಂತೆಗೆದುಕೊಂಡಿದೆ.

Advertisement

ಹೇಳಿಕೆಯಲ್ಲಿ, ಚುನಾವಣಾ ಸಮಿತಿಯು ಮೂರು ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷಗಳಾದ ಎಐಟಿಸಿ, ಸಿಪಿಐ ಮತ್ತು ಎನ್‌ಸಿಪಿಗಳ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ. ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಿ ಮತ್ತು ಎರಡು ಸಂಸತ್ತಿನ ಚುನಾವಣೆಗಳು ಮತ್ತು 21 ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ಸಾಕಷ್ಟು ಅವಕಾಶವನ್ನು ಒದಗಿಸಿದ ನಂತರ ಆಯೋಗ ಈ ಕ್ರಮ ಕೈಗೊಂಡಿದೆ.

ಭಾರತದ ಚುನಾವಣಾ ಆಯೋಗವು ಆಮ್ ಆದ್ಮಿ ಪಕ್ಷವನ್ನು (ಎಎಪಿ) ರಾಷ್ಟ್ರೀಯ ಪಕ್ಷವೆಂದು ಗುರುತಿಸಿದೆ.ಪ್ಯಾರಾ 6 ಬಿ (iii) ಯ ಷರತ್ತನ್ನು ಪೂರೈಸಿದ ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಗುರುತಿಸಲ್ಪಟ್ಟಿದೆ, ಅದು ನಾಲ್ಕು ರಾಜ್ಯಗಳಲ್ಲಿ ರಾಜ್ಯ ಪಕ್ಷವಾಗಿ ಗುರುತಿಸಲ್ಪಟ್ಟಿದೆ, ಚುನಾವಣಾ ಕಾರ್ಯಕ್ಷಮತೆಯ ಆಧಾರದ ಮೇಲೆ ದೆಹಲಿ, ಗೋವಾ, ಪಂಜಾಬ್ ಮತ್ತು, ಇತ್ತೀಚೆಗೆ ಗುಜರಾತ್ ನಲ್ಲಿ ತನ್ನ ಅಸ್ತಿತ್ವ ತೋರಿದೆ.

ಉತ್ತರ ಪ್ರದೇಶದಲ್ಲಿ ಆರ್‌ಎಲ್‌ಡಿ, ಆಂಧ್ರಪ್ರದೇಶದಲ್ಲಿ ಬಿಆರ್‌ಎಸ್, ಮಣಿಪುರದಲ್ಲಿ ಪಿಡಿಎ, ಪುದುಚೇರಿಯಲ್ಲಿ ಪಿಎಂಕೆ, ಪಶ್ಚಿಮ ಬಂಗಾಳದಲ್ಲಿ ಆರ್‌ಎಸ್‌ಪಿ ಮತ್ತು ಮಿಜೋರಾಂನಲ್ಲಿ ಎಂಪಿಸಿಗೆ ನೀಡಲಾಗಿದ್ದ ರಾಜ್ಯ ಪಕ್ಷದ ಸ್ಥಾನಮಾನವನ್ನು ರದ್ದುಗೊಳಿಸಲಾಗಿದೆ. ಅವು ನೋಂದಾಯಿತ ಗುರುತಿಸಲ್ಪಡದ ರಾಜಕೀಯ ಪಕ್ಷಗಳಾಗಿ (RUPP) ಉಳಿಯುತ್ತವೆ.

ನಾಗಾಲ್ಯಾಂಡ್‌ನಲ್ಲಿ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಮೇಘಾಲಯದಲ್ಲಿ ವಾಯ್ಸ್ ಆಫ್ ಪೀಪಲ್ ಪಾರ್ಟಿ ಮತ್ತು ತ್ರಿಪುರಾದಲ್ಲಿ ತಿಪ್ರಾ ಮೋಥಾ ಮಾನ್ಯತೆ ಪಡೆದ ರಾಜ್ಯ ರಾಜಕೀಯ ಪಕ್ಷ ಸ್ಥಾನಮಾನವನ್ನು ನೀಡಿದೆ.

Advertisement

ಬಿಜೆಪಿ, ಕಾಂಗ್ರೆಸ್, ಸಿಪಿಐ(ಎಂ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಮತ್ತು ಎಎಪಿ ಈಗ ರಾಷ್ಟ್ರೀಯ ಪಕ್ಷಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next