Advertisement
ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣ ವಿಭಾಗ ನೂತನ ಮೊಬೈಲ್ ಅಪ್ಲಿಕೇಷನ್ ಸಿದ್ಧಪಡಿಸುತ್ತಿದೆ. ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿಯಿದ್ದು, ಆಯೋಗ ಈಗಿನಿಂದಲೇ ಸಿದ್ಧತೆ ನಡೆಸಿದೆ.
Related Articles
ಈ ಮೊಬೈಲ್ ಆ್ಯಪ್‌ನಲ್ಲಿ ಚುನಾವಣೆ, ಮತದಾನಕ್ಕೆ ಸಂಬಂಧಿಸಿದ ವಿಷಯಗಳ ಮಾಹಿತಿ ಇರುತ್ತದೆ. ಅದರಲ್ಲಿ ಮತದಾರರು ತಮ್ಮ ಮತದಾರರ ಗುರುತಿನ ಚೀಟಿಯ ಸಂಖ್ಯೆ ನಮೂದಿಸಿದರೆ, ಯಾವ ಮತಗಟ್ಟೆಯಲ್ಲಿ ಮತದಾನ ಮಾಡಬೇಕು ಎಂಬ ಮಾಹಿತಿ ದೊರೆಯಲಿದೆ. ಜತೆಗೆ ತಾವು ಯಾವ ಸಮಯದಲ್ಲಿ ಮತದಾನ ಮಾಡಲು ಬರುತ್ತೇವೆ ಎಂಬುದನ್ನು ಮತದಾರರು ನಮೂದಿಸಿದರೆ, ಅದನ್ನು ನೋಂದಣಿ ಮಾಡಿಕೊಂಡು, ಅವರ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ಖಾತ್ರಿಯ ಸಂದೇಶ ಬರಲಿದೆ. ಜತೆಗೆ ಸಂದೇಶದಲ್ಲಿ ಯುನೀಕ್ ಸಂಖ್ಯೆಯೂ ಇರಲಿದೆ.
Advertisement