Advertisement

ವಿಕಲಚೇತನ ಮತದಾರರಿಗೆ ಆಯೋಗದಿಂದ “ಚೈತನ್ಯ’

02:22 AM Apr 12, 2019 | Team Udayavani |

ಪ್ರತಿಯೊಂದು ಮತಕ್ಕೂ ಅದರದೇ ಆದ ಮೌಲ್ಯವಿದೆ. ಯಾರೂ ಮತದಾನದಿಂದ ವಂಚಿತರಾಗಬಾರದು ಎಂಬುದು ಚುನಾವಣಾ ಆಯೋಗದ ಧ್ಯೇಯ. ದೈಹಿಕ ಊನತೆ ಮತದಾನಕ್ಕೆ ಅಡ್ಡಿಯಾಗಬಾರದೆಂಬ ಕಾರಣಕ್ಕೆ ವಿಕಲಚೇತನರು ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಮಾಡಲು ಆಯೋಗ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ.

Advertisement

ಈಗಾಗಲೇ ರಾಜ್ಯದಲ್ಲಿ 4.34 ಲಕ್ಷ ವಿಕಲಚೇತನ ಮತದಾರರನ್ನು ಗುರುತಿಸಲಾಗಿದೆ. ಮತಗಟ್ಟೆಗಳಲ್ಲಿ ತಮಗೆ ಬೇಕಾಗುವ ವ್ಯವಸ್ಥೆಗಳಕುರಿತು ಬೇಡಿಕೆ ಸಲ್ಲಿಸಲು ಆ್ಯಪ್‌ ಮೂಲಕ ಅವಕಾಶ ಮಾಡಿಕೊಡಲಾಗಿದೆ.

ಅದನ್ನು ಆಧರಿಸಿ ರಾಜ್ಯದ ಎಲ್ಲ 58,186 ಮತಗಟ್ಟೆಗಳಲ್ಲಿ ವಿಕಲಚೇತನ ಮತದಾರರು ಹೆಚ್ಚಿರುವ ಮತಗಟ್ಟೆಗಳಲ್ಲಿ 38 ಸಾವಿರ ಗಾಲಿ ಕುರ್ಚಿ, 49ಸಾವಿರ ಭೂತಗನ್ನಡಿ, 405 ಸಂಜ್ಞಾ ಭಾಷಾಂತರರು, ಮತದಾನ ದಿನ ಮತಗಟ್ಟೆಗೆ ಕರೆದುಕೊಂಡು ಬಂದು ಪುನಃ ಬಿಟ್ಟು ಬರಲು 17 ಸಾವಿರ ವಾಹನಗಳ ವ್ಯವಸ್ಥೆಯನ್ನೂ ಆಯೋಗ ಮಾಡಿಕೊಂಡಿದೆ.

ಅಲ್ಲದೇ ಎಲ್ಲ ಮತಗಟ್ಟೆಗಳಲ್ಲಿ ವಿಕಲಚೇತನರಿಗೆ ಲಭ್ಯವಿರುವ ಸೌಲಭ್ಯಗಳ ಪೋಸ್ಟರ್‌ ಅಳವಡಿಸಲಾಗುತ್ತದೆ. ದೃಷ್ಟಿ ಮಾಂದ್ಯರಿಗೆ ಬ್ರೈಲ್‌ ನಲ್ಲಿ ಮುದ್ರಿಸಲಾಗಿರುವ ಮತ ಪತ್ರಗಳನ್ನು ಎಲ್ಲ ಮತಗಟ್ಟೆಗಳಲ್ಲಿ ಒದಗಿಸಲಾಗುತ್ತದೆ. ಸರತಿ ಸಾಲಿನಲ್ಲಿ ವಿಲಕಚೇತರಿಗೆ ಆದ್ಯತೆ ನೀಡಲಾಗುತ್ತದೆ. ಇವರಿಗೆ ಸಹಾಯ ಮಾಡಲು ಮತಗಟ್ಟೆಗಳಲ್ಲಿ ಸ್ವಯಂ ಸೇವಕರನ್ನು ನೇಮಿಸಲಾಗುತ್ತದೆ. ಇದರ ಜೊತೆಗೆ ರ್‍ಯಾಂಪ್‌, ಕುಡಿಯುವ ನೀರು, ಶೌಚಾಲಯ, ನೆರಳು ಮತ್ತು ಬೆಳಕಿನ ವ್ಯವಸ್ಥೆ ಸೇರಿದಂತೆ ಎಲ್ಲ ಬಗೆಯ ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸಲು ಆಯೋಗ ಸಿದಟಛಿತೆ
ಮಾಡಿಕೊಂಡಿದೆ.

ಸಾಮಾನ್ಯವಾಗಿ ಚುನಾವಣಾ ಕರ್ತವ್ಯದಿಂದ ವಿಕಲಚೇತನರಿಗೆ ವಿನಾಯಿತಿ ನೀಡಲಾಗುತ್ತದೆ. ಆದರೆ, ಪ್ರಜಾಪ್ರಭುತ್ವದ ಈ ಸಂಭ್ರಮದಲ್ಲಿ ಅವರನ್ನೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಈ ಬಾರಿವಿಕಲಚೇತನರೇ ಸಂಪೂರ್ಣವಾಗಿ ನಿರ್ವಹಿಸುವ 96 ಮ ತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈ ರೀತಿಯ 28 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಆಗ 3.98 ಲಕ್ಷ ವಿಕಲಚೇತನ ಮತದಾರರ ಪೈಕಿ 2.96 ಲಕ್ಷ ಮತದಾರರು ಮತ ಚಲಾಯಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next