Advertisement

SBI ಸಲ್ಲಿಸಿದ ಚುನಾವಣ ಬಾಂಡ್‌ಗಳ ಡೇಟಾ ಬಹಿರಂಗ ಮಾಡಿದ ಆಯೋಗ: ಏನಿದೆ?

08:34 PM Mar 14, 2024 | Team Udayavani |

ಹೊಸದಿಲ್ಲಿ: ಭಾರತೀಯ ಚುನಾವಣ ಆಯೋಗವು (ಇಸಿಐ) ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹಂಚಿಕೊಂಡಿರುವ ಚುನಾವಣ ಬಾಂಡ್‌ಗಳ ವಿವರಗಳನ್ನು ಗುರುವಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಗಮನಾರ್ಹವಾಗಿ, ಉನ್ನತ ನ್ಯಾಯಾಲಯದ ಗಡುವಿನ ಒಂದು ದಿನದ ಮೊದಲು ಡೇಟಾವನ್ನು ಪ್ರಕಟಿಸಲಾಗಿದೆ.

Advertisement

ಮಾರ್ಚ್ 15 ರಂದು ಸಂಜೆ 5 ಗಂಟೆಯೊಳಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಎಸ್‌ಬಿಐನಿಂದ ಸ್ವೀಕರಿಸಿದ ವಿವರಗಳನ್ನು ಪ್ರಕಟಿಸಲು ಚುನಾವಣ ಸಮಿತಿಗೆ ಸೂಚಿಸಲಾಗಿತ್ತು.

ಚುನಾವಣ ಸಮಿತಿಯು ಹಂಚಿಕೊಂಡಿರುವ ಡೇಟಾ 2019 ರ ಎಪ್ರಿಲ್ 12 ರಿಂದ ಈಗ ರದ್ದಾಗಿರುವ 1,000 ರಿಂದ 1 ಕೋಟಿ ರೂ ಮೌಲ್ಯದ ಮುಖಬೆಲೆಯ ಚುನಾವಣ ಬಾಂಡ್‌ಗಳ ಖರೀದಿಯನ್ನು ಬಹಿರಂಗಪಡಿಸಿದೆ. ಮಾಹಿತಿಯು ಕಂಪನಿಗಳು ಮತ್ತು ವ್ಯಕ್ತಿಗಳು ಮಾಡಿದ ಖರೀದಿಗಳನ್ನು ಸಹ ತೋರಿಸಿದೆ.

ಎಸ್‌ಬಿಐ ಈಗ ರದ್ದಾದ ಚುನಾವಣ ಬಾಂಡ್‌ಗಳನ್ನು ಖರೀದಿಸಿದ ಘಟಕಗಳು ಮತ್ತು ಮಂಗಳವಾರ ಸಂಜೆ ಅವುಗಳನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ವಿವರಗಳನ್ನು ಚುನಾವಣ ಸಂಸ್ಥೆಗೆ ಸಲ್ಲಿಸಿತ್ತು.

ಏನಿದೆ?

Advertisement

ವಿವರಗಳ ಮೊದಲ ಭಾಗದಲ್ಲಿ ಚುನಾವಣ ಬಾಂಡ್‌ಗಳನ್ನು ಖರೀದಿಸಿದ ಘಟಕಗಳನ್ನು ವಿವರಿಸುವ 337 ಪುಟಗಳನ್ನು ಒಳಗೊಂಡಿದೆ. 426 ಪುಟಗಳನ್ನು ಹೊಂದಿರುವ ಎರಡನೇ ಭಾಗವು ರಾಜಕೀಯ ಪಕ್ಷಗಳ ವಿವರಗಳನ್ನು ಒದಗಿಸಿದೆ.

ಚುನಾವಣ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಗ್ರಾಸಿಮ್ ಇಂಡಸ್ಟ್ರೀಸ್, ಮೇಘಾ ಇಂಜಿನಿಯರಿಂಗ್, ಟೊರೆಂಟ್ ಪವರ್, ಭಾರ್ತಿ ಏರ್‌ಟೆಲ್, ಡಿಎಲ್‌ಎಫ್ ಕಮರ್ಷಿಯಲ್ ಡೆವಲಪರ್ಸ್ ಮತ್ತು ವೇದಾಂತ ಲಿ.

ಚುನಾವಣ ಬಾಂಡ್‌ಗಳ ಖರೀದಿದಾರರಲ್ಲಿ ಅಪೊಲೊ ಟೈರ್ಸ್, ಲಕ್ಷ್ಮಿ ಮಿತ್ತಲ್, ಎಡೆಲ್‌ವೀಸ್, ಪಿವಿಆರ್, ಕೆವೆಂಟರ್, ಸುಲಾ ವೈನ್, ವೆಲ್‌ಸ್ಪನ್, ಸನ್ ಫಾರ್ಮಾ ಸೇರಿವೆ.

ಚುನಾವಣ ಬಾಂಡ್‌ಗಳ ಮೂಲಕ ಹಣವನ್ನು ಸ್ವೀಕರಿಸಿರುವ ಪಕ್ಷಗಳಲ್ಲಿ ಬಿಜೆಪಿ, ಕಾಂಗ್ರೆಸ್, ಎಐಎಡಿಎಂಕೆ, ಬಿಆರ್‌ಎಸ್, ಶಿವಸೇನೆ, ಟಿಡಿಪಿ, ವೈಎಸ್‌ಆರ್ ಕಾಂಗ್ರೆಸ್, ಡಿಎಂಕೆ, ಜೆಡಿಎಸ್, ಎನ್‌ಸಿಪಿ, ತೃಣಮೂಲ ಕಾಂಗ್ರೆಸ್, ಜೆಡಿಯು, ಆರ್‌ಜೆಡಿ, ಎಎಪಿ, ಎಸ್‌ಪಿ ಸೇರಿವೆ.

Advertisement

Udayavani is now on Telegram. Click here to join our channel and stay updated with the latest news.

Next