Advertisement

ಮಧ್ಯಪ್ರದೇಶ ಸಚಿವ ಮಿಶ್ರಾಗೆ 3 ವರ್ಷ ಚುನಾವಣೆ ಸ್ಪರ್ಧೆ ನಿಷೇಧ

03:05 PM Jun 24, 2017 | udayavani editorial |

ಭೋಪಾಲ್‌ : 2008ರಲ್ಲಿನ ತನ್ನ ವಿಧಾನಸಭಾ ಚುನಾವಣಾ ಪ್ರಚಾರಾಭಿಯಾನದ ಅಂಗವಾಗಿ ಪಾವತಿ ಸುದ್ದಿ ಬಳಸಿಕೊಂಡಿದ್ದರೆಂಬ ಕಾರಣಕ್ಕಾಗಿ ಚುನಾವಣಾ ಆಯೋಗವು ಮಧ್ಯಪ್ರದೇಶದ ಹಿರಿಯ ಸಚಿವ ನರೋತ್ತಮ ಮಿಶ್ರಾ ಅವರಿಗೆ ಮೂರು ವರ್ಷಗಳ ಚುನಾವಣಾ ಸ್ಪರ್ಧೆ ನಿಷೇಧವನ್ನು ಹೇರಿದೆ. 

Advertisement

ಕಾನೂನಿನ ಪ್ರಕಾರ ಮಿಶ್ರಾ ಅವರು ಚುನಾವಣಾ ಆಯೋಗದ ಈ ಆದೇಶ ಜಾರಿಗೆ ಬಂದಿರುವ ದಿನದಿಂದ ತೊಡಗಿ ಮುಂದಿನ ಮೂರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿ ತಿಳಿಸಿದ್ದಾರೆ. 

2008ರ ವಿಧಾನಸಭಾ ಚುನಾವಣೆಯನ್ನು ಸ್ಪರ್ಧಿಸಿ, ಪ್ರಕೃತ ಕಾಂಗ್ರೆಸ್‌ ಪಕ್ಷದಲ್ಲಿರುವ ರಾಜೇಂದ್ರ ಭಾರ್ತಿ ಅವರು ಸಲ್ಲಿಸಿರುವ ದೂರಿನ ಮೇಲೆ ಚುನಾವಣಾ ಆಯೋಗವು ಈ ನಿರ್ಧಾರವನ್ನು ತೆಗೆದುಕೊಂಡಿದೆ.

ರೈತರ ಆತ್ಮಹತ್ಯೆಯೇ ಮುಂತಾಗಿ ಹಲವಾರು ಕಾರಣಗಳಿಗಾಗಿ ರಾಜಕೀಯ ಎಡರು ತೊಡರುಗಳನ್ನು ಎದುರಿಸುತ್ತಿರುವ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚವಾಣ್‌ ಸರಕಾರಕ್ಕೆ ಚುನಾವಣಾ ಆಯೋಗದ ಈ ಕಠಿನ ಕ್ರಮದಿಂದ ಭಾರೀ ಹಿನ್ನಡೆ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next