Advertisement

ದ.ಕ.: ಎಂಟು ಮತಗಟ್ಟೆಗಳ ಬದಲಾವಣೆ: ಚುನಾವಣ ಆಯೋಗ ಅನುಮೋದನೆ

02:13 AM Mar 24, 2023 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ 6 ಮತಗಟ್ಟೆಗಳು ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರದ 2 ಮತಗಟ್ಟೆಗಳ ಬದಲಾವಣೆಗೆ ಕೇಂದ್ರ ಚುನಾವಣ ಆಯೋಗ ಅನುಮೋದನೆ ನೀಡಿದೆ.

Advertisement

ಮಂಗಳೂರು ಉತ್ತರದ ಕದ್ರಿ ಕಿರಿಯ ತಾಂತ್ರಿಕ ಶಾಲೆಯಲ್ಲಿದ್ದ ಮತಗಟ್ಟೆ ಸಂಖ್ಯೆ 131ರಿಂದ 134ರ ವರೆಗಿನ ಮತಗಟ್ಟೆಗಳ ಕಟ್ಟಡಗಳು ಶಿಥಿಲಗೊಂಡ ಕಾರಣ ಹಾಗೂ ಮೂಲ ಸೌಕರ್ಯಗಳ ಕೊರತೆ ಇರುವ ಕಾರಣ ಅವುಗಳನ್ನು ಕದ್ರಿಯ ಕರ್ನಾಟಕ ಪಾಲಿಟೆಕ್ನಿಕ್‌ ಕಾಲೇಜಿಗೆ ವರ್ಗಾಯಿಸಲಾಗಿದೆ.

ಮತಗಟ್ಟೆ 131ನ್ನು ಕರ್ನಾಟಕ ಪಾಲಿಟೆಕ್ನಿಕ್‌ ಕಾಲೇಜಿನ ಮುಖ್ಯ ಕಟ್ಟಡದ ಪಶ್ಚಿಮ ಭಾಗಕ್ಕೆ, ಮತಗಟ್ಟೆ 132 ಅನ್ನು ಅದೇ ಕಾಲೇಜಿನ ಮುಖ್ಯ ಕಟ್ಟಡದ ಮಧ್ಯಭಾಗದ ಎಡಬದಿಗೆ, ಮತಗಟ್ಟೆ 133 ಅನ್ನು ಕಾಲೇಜಿನ ಮುಖ್ಯ ಕಟ್ಟಡದ ಮಧ್ಯಭಾಗದ ಬಲಬದಿಗೆ, ಮತಗಟ್ಟೆ ಸಂಖ್ಯೆ 134ನ್ನು ಕಾಲೇಜಿನ ಮುಖ್ಯ ಕಟ್ಟಡದ ಪೂರ್ವ ಭಾಗಕ್ಕೆ ಬದಲಾವಣೆ ಮಾಡಲಾಗಿದೆ.

ಸೂರಲ್ಪಾಡಿಯ ಅಸರುದ್ದೀನ್‌ ಕಂಬ್ಲ ಉರ್ದು ಪ್ರೌಢಶಾಲೆಯಲ್ಲಿದ್ದ ಮತಗಟ್ಟೆ ಸಂಖ್ಯೆ 208ನ್ನು ಆ ಕಟ್ಟಡವು ಶಿಥಿಲ ಗೊಂಡಿರುವುದರಿಂದ ಹಾಗೂ ಅಲ್ಲಿನ ಮತದಾರರು 2ರಿಂದ 3 ಕಿ.ಮೀ. ವರೆಗೆ ಬಂದು ಮತ ಚಲಾಯಿಸಬೇಕಿರುವ ಕಾರಣ ಬಬಡಗುಳಿಪಾಡಿಯ ಮಟ್ಟಿ ಅಂಗನವಾಡಿ ಕೇಂದ್ರಕ್ಕೆ ವರ್ಗಾಯಿಸಲಾಗಿದೆ.

ಉಳಾಯಿಬೆಟ್ಟು (ಹಳೆಯ ಕಟ್ಟಡ) ಗ್ರಾ.ಪಂ. ಕಚೇರಿಯ ಮತಗಟ್ಟೆ ಸಂಖ್ಯೆ 215 ಅನ್ನು ಪೆರ್ಮಂಕಿ ಆಚೆಬೈಲು ಅಂಗನವಾಡಿ ಕೇಂದ್ರಕ್ಕೆ ಬದಲಾವಣೆ ಮಾಡಲಾಗಿದೆ.

Advertisement

ತೆಂಕ ಬೆಳ್ಳೂರು ಸೈಂಟ್‌ ಮೈಕಲ್‌ ಹಿ.ಪ್ರಾ. ಶಾಲೆಯ ಮತಗಟ್ಟೆ ಸಂಖ್ಯೆ 48ನ್ನು ತೆಂಕ ಬೆಳ್ಳೂರು ಧನುಪೂಜೆ ಅಂಗನವಾಡಿ ಕೇಂದ್ರಕ್ಕೆ, ವಿಟ್ಲ ಪಟ್ನೂರು ಸಮುದಾಯ ಭವನ ಕೊಡಂಗಾಯಿಯ ಮತಗಟ್ಟೆ ಸಂಖ್ಯೆ 214ನ್ನು ವಿಟ್ಲ ಪಟ್ನೂರು ಅಂಗನವಾಡಿ ಕೇಂದ್ರ ಪೊರ್ಲ ಪ್ಪಾಡಿಗೆ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next