Advertisement
ಸಾಮಾನ್ಯ ಸಭೆ ಇಲ್ಲಗ್ರಾಮ ಪಂಚಾಯತ್ ಸಾಮಾನ್ಯ ಸಭೆ, ತಾ.ಪಂ. ಸಭೆ, ಜಿ.ಪಂ. ಸಭೆ ಗಳೂ ನಡೆಯುತ್ತಿಲ್ಲ. ಯಾವುದೇ ನಿರ್ಧಾರ ಗಳನ್ನು ಕೈಗೊಳ್ಳಲಾಗುತ್ತಿಲ್ಲ. ಜನ ಸಾಮಾನ್ಯರ ಅರ್ಜಿಯನ್ನೂ ಸ್ವೀಕರಿಸಿ ಕ್ರಮ ಕೈಗೊಳ್ಳುವಂತಿಲ್ಲ. ಇದು ಆಡಳಿತ ವ್ಯವಸ್ಥೆಗೆ ಕಗ್ಗಂಟಾಗಿದೆ. ಪಂಚಾಯತ್ ಪಿಡಿಒ, ಕಂದಾಯ ಇನ್ನಿತರ ಎಲ್ಲ ಸರಕಾರಿ ಇಲಾಖಾಧಿಕಾರಿಗಳಿಗೆ ಸ್ಥಳೀಯ ಆಡಳಿತ ವ್ಯವಸ್ಥೆಯತ್ತ ಗಮನಹರಿಸಲಾಗುತ್ತಿಲ್ಲ. ಎಂದು ಗ್ರಾ.ಪಂ.ಅಧ್ಯಕ್ಷರುದೂರುತ್ತಾರೆ. ಇದೀಗ ಉದ್ಯೋಗ ಖಾತರಿ ಯೋಜನೆಯ ಅನುದಾನವನ್ನು ಬಳಸುವ ಸಮಯ. ಆದರೆ ಈ ಅನುದಾನದ ಯೋಜನೆ ರೂಪಿಸಲು, ಕಾಮಗಾರಿ ಆಯ್ಕೆ ಮಾಡುವುದಕ್ಕೆ ನೀತಿಸಂಹಿತೆಯೇ ಅಡ್ಡಿಯಾಗಿದೆ. ಪರಿಣಾಮವಾಗಿ ನಾಗರಿಕರಿಗೆ ಕಿರಿಕಿರಿಯುಂಟಾಗಿದೆ.
ಚುನಾವಣೆ ಪೂರ್ವದಲ್ಲಿ ಆರಂಭವಾದ ರಸ್ತೆ ಕಾಮಗಾರಿಗಳು ಮುಂದುವರಿದಿವೆ. ಕೆಲವೊಂದು ಪೂರ್ತಿಯಾಗಿವೆ. ಆದರೆ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗುತ್ತಿಲ್ಲ. ಕಾರಣ ನೀತಿಸಂಹಿತೆ! ಆದರೆ ಮಳೆಗಾಲದ ಸಿದ್ಧತೆಗೆ ಇಲಾಖೆ ಈಗಾಗಲೇ ಟೊಂಕ ಕಟ್ಟಿದೆ. ಅಧಿಕಾರಿಗಳು ಪ್ರತ್ಯೇಕ ಸಭೆ ಏರ್ಪಡಿಸಿ, ಚರ್ಚಿಸಿ, ಪೂರ್ವಸಿದ್ಧತೆ ಮಾಡತೊಡಗಿದ್ದಾರೆ. ಮೇ 23ರಂದು ನೀತಿಸಂಹಿತೆ ಕೊನೆಯ ಹಂತವನ್ನು ತಲುಪಲಿದ್ದು, ಆ ಬಳಿಕ ಎಲ್ಲ ಕಾಮಗಾರಿಗಳೂ ವೇಗವನ್ನು ಪಡೆಯಲಿವೆ. ಈಗಾಗಲೇ ಇಲಾಖೆಗಳಲ್ಲಿ ಕಾರ್ಯಾರಂಭದ ಒತ್ತಡ ಆರಂಭವಾಗಿವೆ ಎಂದು ಲೋಕೋಪಯೋಗಿ ಇಲಾಖಾಧಿಕಾರಿಗಳು ತಿಳಿಸುತ್ತಾರೆ.