Advertisement
ಚುನಾವಣೆಗೆ ಕೆಲವೇ ದಿನಗಳಿರಬೇಕಾದರೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಫೇಸ್ ಬುಕ್ ಪೇಜ್ ತೆರೆದು ಜನರಲ್ಲಿ ಮತ ಹಾಕುವಂತೆ ಮನವಿ ಮಾಡುತ್ತಿದ್ದಾರೆ. ಇದರೊಂದಿಗೆ ಫೇಸ್ ಬುಕ್‌ಗಳಲ್ಲಿ ಲೈವ್ ಬಂದು ತಾನು ಮಾಡಿದ ಅಭಿವೃದ್ಧಿ ಕೆಲಸಗಳು, ಭರವಸೆಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ.
ಮಂಗಳೂರು: ಚುನಾವಣೆಯ ಪ್ರಚಾರದಲ್ಲಿ ಬಿಜೆಪಿ ಎಲ್‌ಇಡಿ ಪ್ರಚಾರ ವಾಹನ ಮೂಲಕ ಮತದಾರರರನ್ನು ಸೆಳೆಯಲು ರಣತಂತ್ರ ಹೂಡಿದರೆ, ಕಾಂಗ್ರೆಸ್‌ನಲ್ಲಿ ಬಿ. ರಮಾನಾಥ ರೈ, ಶಾಸಕ ಮೊದಿನ್ ಬಾವಾ ಅವರ ಖಾಸಗಿ ಪ್ರಚಾರ ವಾಹನವನ್ನು ಹೊರತುಪಡಿಸಿದರೆ ಇನ್ಯಾವುದೇ ಪ್ರಚಾರ ವಾಹನ ಜಿಲ್ಲೆಯಲ್ಲಿ ಓಡಾಟ ಆರಂಭಿಸಿಲ್ಲ.
Related Articles
Advertisement
ಕಾಂಗ್ರೆಸ್ ಎಲ್.ಇ.ಡಿ. ಪ್ರಚಾರ ವಾಹನ ಇನ್ನೂ ಬಂದಿಲ್ಲಕಾಂಗ್ರೆಸ್ ಸಚಿವ ಬಿ. ರಮಾನಾಥ ರೈ ಹಾಗೂ ಶಾಸಕ ಮೊದಿನ್ ಬಾವಾ ಅವರ ಖಾಸಗಿ ವಾಹನಗಳಷ್ಟೇ ಪ್ರಚಾರ ಕಾರ್ಯ ಆರಂಭಿಸಿದ್ದು, ಪಕ್ಷದಿಂದ ಎಲ್‌ಇಡಿ ಪ್ರಚಾರ ವಾಹನ ಇನ್ನೂ ಜಿಲ್ಲೆಗೆ ಬಂದಿಲ್ಲ. ‘ಪಕ್ಷದ ಎಲ್ಲ ಅಭ್ಯರ್ಥಿಗಳ ನಾಮಪತ್ರ ಸ್ವೀಕೃತವಾದ ಬಳಿಕ ಪ್ರಚಾರ ವಾಹನಗಳು ಬರುವ ಸಾಧ್ಯತೆ ಇದೆ. ಪ್ರಸ್ತುತ ಸಚಿವ ಬಿ. ರಮಾನಾಥ ರೈ ಹಾಗೂ ಶಾಸಕ ಮೊದಿನ್ ಬಾವಾ ಅವರ ಖಾಸಗಿ ವಾಹನಗಳಷ್ಟೇ ಪ್ರಚಾರ ಕಾರ್ಯ ನಡೆಸುತ್ತಿವೆ’ ಎಂದು ಕಾಂಗ್ರೆಸ್‌ನ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ³ಂಗಾಯ ತಿಳಿಸಿದ್ದಾರೆ. ಬಿಜೆಪಿ ಎಲ್.ಇ.ಡಿ. ವಾಹನ ವಿಧಾನಸಭಾ ಕ್ಷೇತ್ರಗಳ ಮೂಲೆ ಮೂಲೆಗಳಿಗೆ ತೆರಳಿ ಮತದಾನ, ಬಿಜೆಪಿ ಸಾಧನೆ, ಕೇಂದ್ರ ಸರಕಾರದ ಜನೋಪಯೋಗಿ ಯೋಜನೆಗಳು, ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಕುರಿತಾಗಿ ಪ್ರಚಾರ ನಡೆಸುತ್ತಿವೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಬಳಿಕ ಬಿಜೆಪಿ ಅಜೆಂಡಾ, ಪಕ್ಷದ ಅಭ್ಯರ್ಥಿ ಬಗ್ಗೆ ಮತದಾರರಿಗೆ ಮಾಹಿತಿ ನೀಡಲಿವೆ. ದೊಡ್ಡ ವಾಹನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 2 ದಿನ ಸಂಚಾರ ನಡೆಸಲಿದೆ. ಅಲ್ಲಲ್ಲಿ 45 ನಿಮಿಷಗಳ ಕಾಲ ವಾಹನ ನಿಲ್ಲಿಸಿ ಬಿಜೆಪಿ ಯೋಜನೆಗಳ ಬಗ್ಗೆ ತಿಳಿಸಲಿದೆ.ಇನ್ನೂ ಪ್ರತಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಒಂದರಂತೆ ಸಣ್ಣ ವಾಹನಗಳು ಪ್ರಚಾರ ಕಾರ್ಯ ನಡೆಸುತ್ತಿವೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿ ಮೂರು ದಿನ 15 ನಿಮಿಷಗಳ ಕಾಲ 14 ಕಡೆಗಳಲ್ಲಿ ಪ್ರಚಾರ ನಡೆಸುತ್ತಿವೆ. ಒಬ್ಬ ವಾಹನ ಚಾಲಕ ಮತ್ತು ಒಬ್ಬ ಪ್ರಚಾರ ನಿರ್ವಾಹಕ ವಾಹನದಲ್ಲಿ ಇರುತ್ತಾರೆ ಎಂದು ಎಲ್.ಇ.ಡಿ. ವಾಹನ ಪ್ರಚಾರದ ಜಿಲ್ಲಾ ಪ್ರಮುಖ್ ಹರೀಶ್ ಮೂಡುಶೆಡ್ಡೆ ತಿಳಿಸಿದ್ದಾರೆ. — ಪ್ರಜ್ಞಾ ಶೆಟ್ಟಿ